ಪಳನಿ ಸಿಎಂ ಪಟ್ಟ ಅಲಂಕರಿಸುವುದು ಚಿನ್ನಮ್ಮನ ಆಶಯವಾಗಿತ್ತು. ಹೀಗಾಗಿ ಗದ್ದುಗೆ ಗೆದ್ದ ಪಳನಿಸ್ವಾಮಿ ಇಂದು ಪರಪ್ಪನ ಅಗ್ರಹಾರದಲ್ಲಿರುವ ಚಿನ್ನಮ್ಮನನ್ನ ಭೇಟಿ ಮಾಡಿ ಆಶೀರ್ವಾದ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಚೆನ್ನೈ (ಫೆ.19): ತಮಿಳುನಾಡಿನ ಚಿನ್ನಮ್ಮನ ಶಪಥ ಈಗ ನಿಜವಾಗಿದೆ. ಅಮ್ಮ ಮತ್ತು ಎಂಜಿಆರ್ ಅವರ ಕನಸುಗಳನ್ನು ನಾವು ನನಸು ಮಾಡುತ್ತೇವೆ, ಹೀಗಂತಾ ಹೇಳಿದ್ದು ತಮಿಳುನಾಡಿನ ನೂತನ ಮುಖ್ಯಮಂತ್ರಿ ಪಳನಿಸ್ವಾಮಿ.

ವಿಶ್ವಾಸ ಮತ ಗೆಲ್ಲುವ ಮೂಲಕ ಶಶಿಕಲಾ ಅವರ ಶಪಥ ನಿಜವಾಗಿದೆ. ಓ ಪನ್ನೀರ್ ಸೆಲ್ವಂ ನೇತೃತ್ವದ ಬಂಡಾಯ ಶಾಸಕರಿಗೆ ಇದರಿಂದ ಮುಖಭಂಗವಾಗಿದೆ ಎಂದಿದ್ದಾರೆ.

ಪಳನಿ ಸಿಎಂ ಪಟ್ಟ ಅಲಂಕರಿಸುವುದು ಚಿನ್ನಮ್ಮನ ಆಶಯವಾಗಿತ್ತು. ಹೀಗಾಗಿ ಗದ್ದುಗೆ ಗೆದ್ದ ಪಳನಿಸ್ವಾಮಿ ಇಂದು ಪರಪ್ಪನ ಅಗ್ರಹಾರದಲ್ಲಿರುವ ಚಿನ್ನಮ್ಮನನ್ನ ಭೇಟಿ ಮಾಡಿ ಆಶೀರ್ವಾದ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸದ್ಯ ತಮಿಳುನಾಡಿನ ಕಿಂಗ್ ಮೇಕರ್ ಚಿನ್ನಮ್ಮ, ಜೈಲಿನಲ್ಲೆ ಕೂತು, ತಮಿಳುನಾಡಿನ ರಾಜ್ಯಭಾರ ಮಾಡೋಕೆ ಸಿದ್ಧರಾಗಿದ್ದಾರೆ.