Asianet Suvarna News Asianet Suvarna News

ನಾಳೆ ಭೂಮಿಗೆ ಅಪ್ಪಳಿಸಲಿದೆ ಚೀನಾದ ಬಾಹ್ಯಾಕಾಶ ಕೇಂದ್ರ

ಬಾಹ್ಯಾಕಾಶದಲ್ಲಿ ಕಾಯಂ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ತನ್ನ ಕನಸನ್ನು ಪೂರೈಸಲು, 2011ರಲ್ಲಿ ಚೀನಾ ಪ್ರಾಯೋಗಿಕವಾಗಿ ಹಾರಿಬಿಟ್ಟಿದ್ದ ಟಿಯಾಂಗ್‌ಗಾಂಗ್‌-1 ಬಾಹ್ಯಾಕಾಶ ನಿಲ್ದಾಣ ಇದೀಗ ವಿಜ್ಞಾನಿಗಳ ನಿಯಂತ್ರಣ ತಪ್ಪಿ ಚಲಿಸತೊಡಗಿದೆ. ಜೊತೆಗೆ ಈ ಬಾಹ್ಯಾಕಾಶ ನಿಲ್ದಾಣ ಭಾನುವಾರ ಭೂಮಿಯ ಅಪ್ಪಳಿಸಲಿದೆ ಎಂದು ವಿಜ್ಞಾನಿಗಳು ಘೋಷಿಸಿದ್ದು, ಇದು ಭಾರೀ ಆತಂಕಕ್ಕೆ ಕಾರಣವಾಗಿದೆ.

Chinese space station heading for Earth

ಬೀಜಿಂಗ್‌: ಬಾಹ್ಯಾಕಾಶದಲ್ಲಿ ಕಾಯಂ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ತನ್ನ ಕನಸನ್ನು ಪೂರೈಸಲು, 2011ರಲ್ಲಿ ಚೀನಾ ಪ್ರಾಯೋಗಿಕವಾಗಿ ಹಾರಿಬಿಟ್ಟಿದ್ದ ಟಿಯಾಂಗ್‌ಗಾಂಗ್‌-1 ಬಾಹ್ಯಾಕಾಶ ನಿಲ್ದಾಣ ಇದೀಗ ವಿಜ್ಞಾನಿಗಳ ನಿಯಂತ್ರಣ ತಪ್ಪಿ ಚಲಿಸತೊಡಗಿದೆ. ಜೊತೆಗೆ ಈ ಬಾಹ್ಯಾಕಾಶ ನಿಲ್ದಾಣ ಭಾನುವಾರ ಭೂಮಿಯ ಅಪ್ಪಳಿಸಲಿದೆ ಎಂದು ವಿಜ್ಞಾನಿಗಳು ಘೋಷಿಸಿದ್ದು, ಇದು ಭಾರೀ ಆತಂಕಕ್ಕೆ ಕಾರಣವಾಗಿದೆ.

ಭಾನುವಾರ ಮುಂಜಾನೆ 11:30ಕ್ಕೆ ಭೂಮಿಯ ವಾತಾವರಣ ಪ್ರವೇಶಿಸಲಿರುವ ಬಾಹ್ಯಾಕಾಶ ನೌಕೆ ಭಾರೀ ಸ್ಫೋಟಕ್ಕೊಳಪಡಲಿದ್ದು, ಅದರ ವಿಷಾಂಶ ವಿವಿಧ ನಗರಗಳಲ್ಲಿ ಹರಡುವ ಸಾಧ್ಯತೆಯಿದೆ. ತೀವ್ರ ವಿಷಕಾರಿ ರಾಸಾಯನಿಕಗಳನ್ನು ತುಂಬಿಕೊಂಡಿರುವ ಬಾಹ್ಯಾಕಾಶ ನೌಕೆ ಸ್ಫೋಟಿಸಿ, ಅತಿಹೆಚ್ಚು ಜನ ಸಂಖ್ಯೆಯಿರುವ ಪ್ರದೇಶಗಳಲ್ಲಿ ಹರಡುವ ಸಾಧ್ಯತೆಯಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಸ್ಫೋಟ ಸಂಭವಿಸಬಹುದಾದ ಪ್ರದೇಶಗಳಲ್ಲಿ ನ್ಯೂಯಾರ್ಕ್, ಬಾರ್ಸಿಲೋನ, ಬೀಜಿಂಗ್‌, ಚಿಕಾಗೊ, ಇಸ್ತಾನ್‌ಬುಲ್‌, ರೋಮ್‌, ಟೊರಾಂಟೊ ಮುಂತಾದ ನಗರಗಳು ಸೇರಿವೆ. ನೌಕೆ ಭೂಮಿಯ ವಾತಾವರಣ ಪ್ರವೇಶಿಸುತ್ತಿದ್ದಂತೆ, ಸರಣಿ ಬೆಂಕಿಯುಂಡೆಗಳು ವೀಕ್ಷಕರಿಗೆ ಕಾಣಿಸಲಿವೆ. ಸೆಟಲೈಟ್‌ನ ತುಣುಕುಗಳು ನಿಖರವಾಗಿ ಎಲ್ಲಿ ಬೀಳಲಿವೆ ಎಂಬುದರ ಬಗ್ಗೆ ವಿಜ್ಞಾನಿಗಳಿಗೆ ಇನ್ನೂ ಸ್ಪಷ್ಟವಾಗಿಲ್ಲ. ಯುರೋಪಿಯನ್‌ ಬಾಹ್ಯಾಕಾಶ ಸಂಸ್ಥೆ ಕೂಡ ಬಾಹ್ಯಾಕಾಶ ನಿಲ್ದಾಣದ ಬಗ್ಗೆ ನಿಗಾವಿಟ್ಟಿದೆ.

Follow Us:
Download App:
  • android
  • ios