ಜುಲೈ 26 ರಂದು ಚೀನಾದ 12 ಸೈನಿಕರು ಉತ್ತರಾಖಂಡದ ಬರಹೂತಿ ಪ್ರದೇಶಕ್ಕೆ ಒಳನುಸುಳಿದ್ದಾರೆ. ಸುಮಾರು ಒಂದು ಕಿಲೋ ಮೀಟರ್ ವರೆಗೆ ಗಡಿಯೊಳಗೆ ನುಗ್ಗಿದ ಚೀನಾ ಸೈನಿಕರು, ಸುಮಾರು 2 ಗಂಟೆಗಳ ಕಾಲ ಗಡಿಯಲ್ಲಿಯೇ ಇದ್ದು ಹೋಗಿದ್ದಾರೆ.
ನವದೆಹಲಿ(ಜು.31): ಗಡಿಯಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಾ ಬಂದಿರುವ ಚೀನಾ ಮತ್ತೆ ಭಾರತವನ್ನು ಕೆಣಕಿದೆ. ಎರಡನೇ ಬಾರಿಗೆ ಭಾರತದ ಗಡಿಯೊಳಗೆ ಅತಿಕ್ರಮಣ ಪ್ರವೇಶ ಮಾಡಿದೆ. ಚೀನಾದ 12 ಸೈನಿಕರಿಗೆ ಭಾರತೀಯ ಸೇನೆ ಕೂಡ ಕೂಡ ದಿಟ್ಟ ಉತ್ತರ ನೀಡಿದೆ.
ಜುಲೈ 26 ರಂದು ಚೀನಾದ 12 ಸೈನಿಕರು ಉತ್ತರಾಖಂಡದ ಬರಹೂತಿ ಪ್ರದೇಶಕ್ಕೆ ಒಳನುಸುಳಿದ್ದಾರೆ. ಸುಮಾರು ಒಂದು ಕಿಲೋ ಮೀಟರ್ ವರೆಗೆ ಗಡಿಯೊಳಗೆ ನುಗ್ಗಿದ ಚೀನಾ ಸೈನಿಕರು, ಸುಮಾರು 2 ಗಂಟೆಗಳ ಕಾಲ ಗಡಿಯಲ್ಲಿಯೇ ಇದ್ದು ಹೋಗಿದ್ದಾರೆ.
ಇನ್ನೂ ವಿಷಯ ತಿಳಿದ ಭಾರತೀಯ ಸೇನಾ ಪಡೆ ಚೀನಾ ಸೈನಿಕರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದೆ. ಸುಮಾರು 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಚೀನಾ ಸೇನೆಯನ್ನು ಹಿಮ್ಮೆಟಿಸಿದೆ. ಇಷ್ಟೆ ಅಲ್ಲ ಚೀನಾ ಭಾರತದ ವಾಯುಗಡಿಯನ್ನೂ ಸಹ ಉಲ್ಲಂಘನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಭಾರತೀಯ ವಾಯುಗಡಿಯನ್ನು ಉಲ್ಲಂಘಿಸಿ ಚೀನಾ ವಿಮಾನಗಳು 5 ನಿಮಿಷ ಹಾರಾಟ ನಡೆಸಿ ವಾಪಸ್ ತೆರಳಿದೆ ಎಂದು ತಿಳಿದು ಬಂದಿದೆ.
ಎರಡನೇ ಬಾರಿಗೆ ಚೀನಾ ಸೈನಿಕರು ಭಾರತದ ಗಡಿಯೊಳಗೆ ನುಸುಳಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ಇಬ್ಬರು ಚೀನಾದ ಪಿಎಲ್ಎ ಸೈನಿಕರು ಉತ್ತರಾಖಂಡದ ಬರ್ಹೊಲಿ ಪ್ರದೇಶದಲ್ಲಿ 200 ಮೀಟರ್ ಒಳ ಪ್ರವೇಶ ಮಾಡಿದ್ದರು. ಇದೀಗ ಮತ್ತೆ ಒಳನುಸುಳುವ ಮೂಲಕ ಮತ್ತೆ ತನ್ನ ಕ್ಯಾತೆ ತೆಗೆದಿದೆ.
ಒಟ್ಟಿನಲ್ಲಿ ಪದೇ ಪದೇ ಗಡಿಯಲ್ಲಿ ಕ್ಯಾತೆ ತೆಗೆಯುವ ಮೂಲಕ ಭಾರತೀಯ ಸೇನೆಯನ್ನು ಕೆಣಕುತ್ತಲೆ ಬಂದಿದೆ. ಇದೇ ರೀತಿ ಉದ್ದಟತನ ಮುಂದುವರೆಸಿದರೆ, ಚೀನಾಗೆ ಭಾರತ ತಕ್ಕ ಪಾಠ ಕಲಿಸೋದೇ ಬಿಡದು.
