ಬ್ರಿಕ್ಸ್ ಸಮಾವೇಶದಲ್ಲಿ ಚೀನಾ ಪತ್ರಕರ್ತೆಯೊಬ್ಬಳು ಹಿಂದಿಯಲ್ಲಿ ಮಾತನಾಡುತ್ತಾ ಭಾರತೀಯರ ಬಗ್ಗೆ ಅಪಾರ ಕಾಳಜಿವಹಿಸಿ ಮಾತನಾಡುತ್ತಿದ್ದಳು. ಇದನ್ನ ಗಮನಿಸಿದ ಸುದ್ದಿಸಂಸ್ಥೆಯೊಂದು ತಾಂಗ್ ಯುಂಗೈ ಸಂದರ್ಶನ  ಮಾಡಿದರು.

ಬೀಜಿಂಗ್(ಸೆ.06): ಬ್ರಿಕ್ಸ್ ಸಮಾವೇಶದಲ್ಲಿ ಚೀನಾ ಪತ್ರಕರ್ತೆಯೊಬ್ಬಳು ಹಿಂದಿಯಲ್ಲಿ ಮಾತನಾಡುತ್ತಾ ಭಾರತೀಯರ ಬಗ್ಗೆ ಅಪಾರ ಕಾಳಜಿವಹಿಸಿ ಮಾತನಾಡುತ್ತಿದ್ದಳು. ಇದನ್ನ ಗಮನಿಸಿದ ಸುದ್ದಿಸಂಸ್ಥೆಯೊಂದು ತಾಂಗ್ ಯುಂಗೈ ಸಂದರ್ಶನ ಮಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಂದರ್ಶನದಲ್ಲಿ ಪತ್ರಕರ್ತೆ ತಾಂಗ್ 'ಯುಂಗೈ ಗಡಿ ವಿವಾದ ದೊಡ್ಡ ವಿವಾದವೇನೂ ಅಲ್ಲ. ನನಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮೇಲೆ ವಿಶ್ವಾಸವಿದೆ. ಖಂಡಿತಾ ಬ್ರಿಕ್ಸ್ ಸಮಾವೇಶದ ವೇಳೆ ಡೊಕ್ಲಾಂ ಗಡಿ ವಿವಾದವನ್ನು ಬಗೆ ಹರಿಸುತ್ತಾರೆ' ಅಂತ ಸ್ಪಷ್ಟಪಡಿಸಿದಳು.

ಇದೇ ವೇಳೆ ಹಿಂದಿಯ ನೂರಿ ಚಿತ್ರದ "ಆ ಜಾರೇ" ಚಿತ್ರಗೀತೆಯನ್ನು ಹಾಡಿ ಭಾರತೀಯರಿಗೆ ಕೈ ಮುಗಿದು ನಮಸ್ತೆ ಎಂದೂ ಹೇಳಿದ್ದಾರೆ. ಅಲ್ಲದೇ ಈಕೆ ನಿಗರ್ಗಳವಾಗಿ ಹಿಂದಿ ಭಾಷೆಯಬನ್ನು ಮಾತನಾಡುತ್ತಾಳೆ ಎಂಬುವುದು ಮತ್ತೊಂದು ವಿಶೇಷ