ಡೋಕ್ಲಾಮ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತ-ಚೀನಾ ಮಾತಿನ ಸಮರ ಮುಂದುವರಿದಿದೆ. ಡೋಕ್ಲಾಮ್ ಗಡಿ ಪ್ರದೇಶದಲ್ಲಿ ಬಿಕ್ಕಟ್ಟು ನಿರ್ಮಾವಾಗಿ 50 ದಿನ ಕಳೆದರು ಸಮಸ್ಯೆ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾ ನಡುವಿನ ಯುದ್ಧಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂದು ಚೀನಾದ ಆಂಗ್ಲ ಪತ್ರಿಕೆಯೊಂದು ಸಂಪಾದಕೀಯ ಬರೆದಿದೆ.
ನವದೆಹಲಿ(ಆ.10): ಡೋಕ್ಲಾಮ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತ-ಚೀನಾ ಮಾತಿನ ಸಮರ ಮುಂದುವರಿದಿದೆ. ಡೋಕ್ಲಾಮ್ ಗಡಿ ಪ್ರದೇಶದಲ್ಲಿ ಬಿಕ್ಕಟ್ಟು ನಿರ್ಮಾವಾಗಿ 50 ದಿನ ಕಳೆದರು ಸಮಸ್ಯೆ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾ ನಡುವಿನ ಯುದ್ಧಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂದು ಚೀನಾದ ಆಂಗ್ಲ ಪತ್ರಿಕೆಯೊಂದು ಸಂಪಾದಕೀಯ ಬರೆದಿದೆ.
ಶಾಂತಿಯುತವಾಗಿ ಸಮಸ್ಯೆಯ ಇತ್ಯರ್ಥಕ್ಕೆ ಬಾಗಿಲು ಮುಚ್ಚುತ್ತಿದೆ . ಎರಡೂ ಸೇನೆಗಳ ನಡುವಿನ ಜಟಾಪಟಿಗೆ ಕ್ಷಣಗಣನೆ ಆರಂಭವಾಗುತ್ತಿದೆ ಗಡಿಯಾರದ ಮುಳ್ಳು ಮುನ್ನಡೆಯುತ್ತಿದೆ. ಆದರೆ ಇಂಥಾ ಪರಿಸ್ಥಿತಿಯನ್ನು ತಡೆಗಟ್ಟಬೇಕು ಎಂದರೆ ಭಾರತವು ವಿವಾದಿತ ಡೋಕ್ಲಾಮ್ ಪ್ರದೇಶದಿಂದ ಹಿಂದೆ ಸರಿಯುವುದಿಲ್ಲ ಎಂದು ದ ಚೀನಾ ಡೈಲಿ ಹೇಳಿದೆ.
ಐತಿಹಾಸಿಕ ಒಪ್ಪಂದಗಳನ್ನು ಮುಂದಿಟ್ಟುಕೊಂಡು ಭಾರತಕ್ಕೆ ಚೀನಾ ದೇಶವು ಸೇನೆ ಹಿಂಪಡೆಯಬೇಕು ಎಂದು ಒತ್ತಾಯಿಸಿದೆ.
