ಬಾಯಿಯಿಂದ ಪ್ಲೇಟಿನವರೆಗೆ ಇಳಿಯುವ ಉದ್ದನೆಯ ನೂಡಲ್’ಗಳನ್ನು ನೀವೆಲ್ಲಾ ನೋಡಿರುತ್ತೀರಿ. ಆದರೆ, ಚೀನಾದ ಬಾಣಸಿಗರು 10,100 ಅಡಿ ಉದ್ದದ ನೂಡಲ್ ತಯಾರಿಸಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ.

ಬೀಜಿಂಗ್ (ಡಿ.18): ಬಾಯಿಯಿಂದ ಪ್ಲೇಟಿನವರೆಗೆ ಇಳಿಯುವ ಉದ್ದನೆಯ ನೂಡಲ್’ಗಳನ್ನು ನೀವೆಲ್ಲಾ ನೋಡಿರುತ್ತೀರಿ. ಆದರೆ, ಚೀನಾದ ಬಾಣಸಿಗರು 10,100 ಅಡಿ ಉದ್ದದ ನೂಡಲ್ ತಯಾರಿಸಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ.

ಈ ನೂಡಲ್ ತೂಕ 66 ಕೆ.ಜಿ. ಇದ್ದು, 40 ಕೆ.ಜಿ. ಮೈದಾಹಿಟ್ಟು, 26.8 ಲೀಟರ್ ನೀರು ಮತ್ತು 0.6 ಕೆ.ಜಿ. ಉಪ್ಪನ್ನು ಬಳಸಲಾಗಿದೆ. ವಿಶ್ವದಾಖಲೆಯ ನೂಡಲ್ ತಯಾರಿಸಲು 17 ಗಂಟೆ ಬೇಕಾಯಿತಂತೆ.

2001ರಲ್ಲಿ 1800 ಅಡಿ ಉದ್ದದ ನೂಡಲ್ ತಯಾರಿಸಿ ವಿಶ್ವದಾಖಲೆ ಬರೆಯಲಾಗಿತ್ತು. ಇದೀಗ ದಾಖಲೆಯನ್ನು ಚೀನಾದಲ್ಲಿ ಮುರಿಯಲಾಗಿದೆ.