ಸೋಶಿಯಲ್ ಮೀಡಿಯಾದಲ್ಲಿ ವಿಶಿಷ್ಟ ಪ್ರಸಂಗಗಳು ಖಂಡಿತ ವೈರಲ್ ಆಗುತ್ತವೆ. ಕ್ಯಾಮರಾ ಮುಂದೆ ತನ್ನ ಸಾಹಸ ಮೆರಯಲು ಜೀವಂತ ಆಕ್ಟೋಪಸ್​​ ಅನ್ನು ತಿನ್ನಲು ಪ್ರಯತ್ನಿಸಿದ ಚೀನಾದ ಮಹಿಳೆಯೊಬ್ಬಳಿಗೆ ಅದೆ ಅಕ್ಟೋಪಸ್ ಸರಿಯಾದ ಏಟು ನೀಡಿದೆ.

ಹುಂಜಕ್ಕೆ ಟಿಕೆಟ್ ಕೊಟ್ಟ ನಿರ್ವಾಹಕ, ಸರಿಯಾದ ಉತ್ತರನ್ನೇ ಕೊಟ್ಟ ಪ್ರಯಾಣಿಕ

ಚೀನಾದ ಮಹಿಳೆ ವಿಡಿಯೋವನ್ನು ‘ಕುವಾಶೌ’ ಎಂಬ ಅಲ್ಲಿಯ ಜನಪ್ರಿಯ ವಿಡಿಯೋ ವೆಬ್ಸೈಟ್ ನಲ್ಲಿ ಶೇರ್​ ಮಾಡಿಕೊಳ್ಳಲು ಈ ಸಾಹಸಕ್ಕೆ ಮುಂದಾಗಿದ್ದಾಳೆ.  ಈ ಮಹಿಳೆಗೆ ಮೊದಲಿನಿಂದಲೂ ಸಮುದ್ರ ಜೀವಿಗಳನ್ನು ತಿನ್ನುವ ಚಟವಿದೆಯಂತೆ. ಈ ಬಗೆಯ ವಿಡಿಯೋಗಳನ್ನು ಸಾಕಷ್ಟು ಅಪ್ ಲೋಡ್ ಮಾಡಿರುವ ಮಹಿಳೆ ಭಾರೀ ಫೆಮಸ್ ಕೂಡಾ. ಆದರೆ ಈ ಆಕ್ಟೋಪಸ್ ನೀಡಿದ ಹೊಡೆತಕ್ಕೆ ಆಕೆ ಕಂಗಾಲಾಗಿಹೋಗಿದ್ದಾಳೆ.