ಕೋಲಾರ[ಮೇ. 09]  KSRTC ಬಸ್ ನಿರ್ವಾಹಕ ಹುಂಜಕ್ಕೂ15 ರುಪಾಯಿ ಟಿಕೆಟ್ ನೀಡಿದ್ದಾರೆ. ಟಿಕೆಟ್ ನೀಡಿದ ಮೇಲೆ ಸೀಟು ಸಿಗಬೇಕಲ್ವಾ?  ಪ್ರಯಾಣಿಕ ಕೂಡಾ ಅಷ್ಟೆ ಚಾಲಾಕಿ. ಟಿಕೆಟ್ ಗೆ ದುಡ್ಡು ಕೊಟ್ಟ ಕಾರಣಕ್ಕೆ ಹುಂಜವನ್ನು ಸೀಟ್ ಮೇಲೆಯೇ ಕುಳ್ಳಿರಿಸಿಕೊಂಡು ಪ್ರಯಾಣ ಮಾಡಿದ್ದಾನೆ.

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ಘಟಕಕ್ಕೆ ಸೇರಿರುವ ಬಸ್ಸು ಇದಾಗಿದ್ದು ಕೋಲಾರದಿಂದ ಎಚ್.ಕ್ರಾಸ್ ಗೆ ಹೋಗುವ ಪ್ರಯಾಣಿಕನಿಂದ ಹುಂಜಗೂ ಟಿಕೆಟ್ ಪಡೆದಿದ್ದಾನೆ. ಮೇ 7ನೇ ತಾರೀಖು ಈ ಘಟನೆ ನಡೆದಿದ್ದು ನಾನು ಹುಂಜಕ್ಕೂ ಟಿಕೆಟ್ ತೆಗೆದುಕೊಂಡಿದ್ದೇನೆ ಎಂದು ಬೇರೆಯವರಿಗೆ ಸೀಟು ಬಿಡದೆ ಹುಂಜದ ಮಾಲೀಕ ತನ್ನ ಪಕ್ಕದಲ್ಲೇ ಕೂರಿಸಿಕೊಂಡಿರುವ ಪೋಟೋ ಹಾಗೂ ಬಸ್ ಟಿಕೆಟ್ ನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

ಕುದುರೆ ಏರಿ ಎಕ್ಸಾಂಗೆ ಬಂದ ವಿದ್ಯಾರ್ಥಿನಿ, ವಿಡಿಯೋ ವೈರಲ್

ಒಟ್ಟಿನಲ್ಲಿ ಸೇರಿಗೆ ಸವ್ವಾಸೇರು ಎಂಬ ರೀತಿಯ ಈ ಪ್ರಕರಣ ಒಂದು  ಕ್ಷಣ ನಗು ತರಿಸಿದರೂ ಇಂಥವರೂ ಇರುತ್ತಾರೆ ಎಂಬುದನ್ನು ಒಪ್ಪಿಕೊಳ್ಳಲೇಬೇಕಾಗಿದೆ.