ಬೀಜಿಂಗ್(ಅ.1): ಸುಧಾರಿತ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ನಿಯೋಜಿಸುವ ಅಮೆರಿಕ ಮತ್ತು ದಕ್ಷಿಣ ಕೊರಿಯಾದ ನಿರ್ಧಾರಕ್ಕೆ ಅವರು ಖಂಡಿತಾ ಬೆಲೆ ತೆರಬೇಕಾಗುತ್ತದೆ ಎಂದು ಚೀನಾದ ಪ್ರಮುಖ ಪತ್ರಿಕೆಯೊಂದು ಹೇಳಿದೆ. ಆ ದೇಶಗಳ ನಿರ್ಧಾರವು ನಮ್ಮ ಪ್ರತಿದಾಳಿಗೆ ಉತ್ತೇಜಿಸಿದಂತಿದೆ ಎಂದೂ ಪತ್ರಿಕೆಯಲ್ಲಿ ಝಾಂಗ್ ಶೆಂಗ್ ಹೆಸರಲ್ಲಿ ಪ್ರಕಟವಾದ ವರದಿ ತಿಳಿಸಿದೆ. ಉತ್ತರ ಕೊರಿಯಾದ ನಾಲ್ಕನೇ ಅಣ್ವಸ ಪರೀಕ್ಷೆ, ಉಪಗ್ರಹ ಉಡಾವಣೆ, ವಿವಿಧ ಕ್ಷಿಪಣಿಗಳ ಪರೀಕ್ಷೆಯಂತಹ ಬೆಳವಣಿಗೆಗಳ ಬಳಿಕ ಕೊರಿಯಾ ಪರ್ಯಾಯ ದ್ವೀಪದಾದ್ಯಂತ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಉ. ಕೊರಿಯಾದ ದಾಳಿಯನ್ನು ಎದುರಿಸಲೆಂದು ಕ್ಷಿಪಣಿ ನಿಗ್ರಹ ವ್ಯವಸ್ಥೆ ನಿಯೋಜಿಸಲು ಅಮೆರಿಕಕ್ಕೆ ದ.ಕೊರಿಯಾ ಒಪ್ಪಿಗೆ ನೀಡಿತ್ತು.