Asianet Suvarna News Asianet Suvarna News

4 ಸಾವಿರಕ್ಕೂ ಅಧಿಕ ಇಂತಹ ವೆಬ್ ಸೈಟ್ ಗಳು ದೇಶದಲ್ಲಿ ಬ್ಯಾನ್

ಮಾರಕವಾದ ಅಪಾಯಕಾರಿ ಅಂಶಗಳನ್ನು ಒಳಗೊಂಡಂತಹ 4 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ವೆಬ್ ಸೖಟ್ ಗಳನ್ನು ಬ್ಯಾನ್ ಮಾಡಲಾಗಿದ್ದು, ಇಂಟರ್ನೆಟ್ ನಿಂದ  ಲಕ್ಷಕ್ಕೂ ಅಧಿಕ ಅಂಶಗಳನ್ನು ತೆಗೆದು ಹಾಕಲಾಗಿದೆ. 

China Shuts 4000 websites
Author
Bengaluru, First Published Sep 22, 2018, 3:10 PM IST
  • Facebook
  • Twitter
  • Whatsapp

ಬೀಜಿಂಗ್ : ಅಪಾಯಕಾರಿ ಅಂಶಗಳನ್ನು ಒಳಗೊಂಡಂತಹ 4 ಸಾವಿರಕ್ಕೂ ಅಧಿಕ ವೆಬ್ ಸೈಟ್ ಗಳಿಗೆ ಚೀನಾ ಸರ್ಕಾರ ನಿಷೇಧ  ಹೇರಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಸೈಟ್ ಗಳನ್ನು ಬ್ಯಾನ್ ಮಾಡಲಾಗಿದೆ. 

ಈ ಬಗ್ಗೆ ಚೀನಾ ಕ್ಸಿನ್ ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಅಕ್ರಮವಾಗಿ ನಡೆಸುವ ಎಲ್ಲಾ ವೆಬ್ ಸೈಟ್ ಗಳಿಗೆ ಬೀಗ ಬಿದ್ದಿದೆ ಎಂದು ಹೇಳಿದೆ.

ಚೀನಾ ಸರ್ಕಾರ  ಅಕ್ರಮ ಆನ್ ಲೈನ್ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ಸಲುವಾಗಿ ಈ ಕ್ರಮ ಕೈಗೊಂಡಿದೆ. ಇದರಲ್ಲಿ ಪ್ರಮುಖವಾಗಿ ಪೋರ್ನೋಗ್ರಫಿ, ಕಳ್ಳತನ, ಧಾರ್ಮಿಕ ವಿಚಾರಗಳು ಹಾಗೂ ಸುಳ್ಳು ಸುದ್ದಿಗಳನ್ನು ಹರಡುವ ವೆಬ್ ಸೈಟ್ ಗಳು ಬ್ಯಾನ್ ಆಗಿವೆ.

ಕಳೆದ ಮೇ ತಿಂಗಳಿನಿಂದ ಈ ಅಭಿಯಾನವನ್ನು ಆರಂಭ ಮಾಡಲಾಗಿದ್ದು, ಆನ್ ಲೈನ್ ನಲ್ಲಿ ಅತ್ಯಂತ ಅಪಾಯಕಾರಿಯಾದ  ಒಟ್ಟು 147000 ಮಾಹಿತಿಗಳನ್ನು ತೆಗೆದು ಹಾಕಲಾಗಿದೆ. 

Follow Us:
Download App:
  • android
  • ios