ಎನ್ಎಸ್'ಜಿ ಕುರಿತಂತೆ ನಾವು ರಾಜಕೀಯ ಮಾಡುವುದಿಲ್ಲ ಎಂದು ಕಳೆದ ವಾರ ದೆಹಲಿಯಲ್ಲಿ ಚೀನಾ ಚಿಂತಕರ ಚಾವಡಿ ಅಭಿಪ್ರಾಯಪಟ್ಟಿತ್ತು.
ಬೀಜಿಂಗ್(ಡಿ.12): ಪಾಕಿಸ್ತಾನ ಮೂಲದ ಉಗ್ರವಾದಿ ಮಸೂದ್ ಅಜರ್ ವಿಷಯದಲ್ಲಿ ತಮ್ಮ ನೀತಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಎಂದು ಚೀನಾ ಸ್ಪಷ್ಟಪಡಿಸಿದೆ.
ಈ ಮೂಲಕ ತಿಂಗಳಾಂತ್ಯದಲ್ಲಿ ವಿಶ್ವಸಂಸ್ಥೆಯಲ್ಲಿ ಜೆಇಎಂ ಮುಖ್ಯಸ್ಥನಿಗೆ ನಿಷೇಧ ಹೇರುವಂತೆ ಮಾಡುವ ಭಾರತದ ಯತ್ನಕ್ಕೆ ತಡೆಯೊಡ್ಡುವ ಚೀನಾದ ಪ್ರಯತ್ನ ಮುಂದುವರಿಯಲಿದೆ ಎಂಬ ಸ್ಪಷ್ಟ ಸಂದೇಶ ನೀಡಿದೆ. ಭಾರತ-ಚೀನಾ ಸಂಬಂಧ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಜೆಂಗ್ ಶುವಾಂಗ್ ಈ ವಿಷಯ ತಿಳಿಸಿದ್ದಾರೆ.
ಅಣ್ವಸ್ತ್ರ ಪೂರೈಕೆದಾರರ ಸಮೂಹ(ಎನ್‌ಎಸ್'ಜಿ)ಕ್ಕೆ ಭಾರತದ ಸೇರ್ಪಡೆ ವಿಷಯದಲ್ಲೂ ಚೀನಾದ ನಿಲುವು ಬದಲಾಗಿಲ್ಲ ಎಂಬ ಸುಳಿವನ್ನೂ ಜೆಂಗ್ ನೀಡಿದ್ದಾರೆ.
ಎನ್ಎಸ್'ಜಿ ಕುರಿತಂತೆ ನಾವು ರಾಜಕೀಯ ಮಾಡುವುದಿಲ್ಲ ಎಂದು ಕಳೆದ ವಾರ ದೆಹಲಿಯಲ್ಲಿ ಚೀನಾ ಚಿಂತಕರ ಚಾವಡಿ ಅಭಿಪ್ರಾಯಪಟ್ಟಿತ್ತು.
ಆದರೆ ಉಭಯ ರಾಷ್ಟ್ರಗಳ ಪರಸ್ಪರ ಸಹಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
