ಈ ಹಿಂದೆಯೂ ಈ ವಿಚಾರದಲ್ಲಿ ಕಟುವಾಗಿ ಮಾತನಾಡಿದ್ದ ಚೀನಾ, 1962ರ ಯುದ್ಧವನ್ನು ಭಾರತ ಮರೆತಿದೆ ಎಂದು ಹಂಗಿಸಿತ್ತು. ಇದಕ್ಕೆ ಪ್ರತಿಯಾಗಿ ಅರುಣ್ ಜೇಟ್ಲಿಯವರು, ಈಗಿನ ಭಾರತವು 1962ರ ಭಾರತಕ್ಕಿಂತ ಭಿನ್ನವಾಗಿದೆ ಎಂದು ಟಾಂಗ್ ಕೊಟ್ಟಿದ್ದರು.

ನವದೆಹಲಿ(ಜುಲೈ 03): 1962ರ ಭಾರತವೇ ಬೇರೆ ಈಗಿನ ಭಾರತವೇ ಬೇರೆ ಎಂದು ಚೀನಾಗೆ ಟಾಂಗ್ ಕೊಟ್ಟಿದ್ದ ಭಾರತದ ರಕ್ಷಣಾ ಸಚಿವ ಅರುಣ್ ಜೇಟ್ಲಿ ಹೇಳಿಗೆ ಈಗ ಚೀನಾ ಅದೇ ದಾಟಿಯಲ್ಲಿ ತಿರುಗೇಟು ನೀಡಿದೆ. 2017ರ ಭಾರತ ಹೇಗೆ ವಿಭಿನ್ನವೋ ಹಾಗೆಯೇ ಚೀನಾ ಕೂಡ ಬದಲಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಹೇಳಿದ್ದಾರೆ.

ಸಿಕ್ಕಿಂ ಬಳಿ ತನ್ನ ಗಡಿಭಾಗದೊಳಗೆ ಭಾರತೀಯ ಸೈನಿಕರು ಪ್ರವೇಶಸಿದ್ದರೆಂದು ಮತ್ತೊಮ್ಮೆ ವಾದಿಸಿರುವ ಚೀನಾ, ತನ್ನ ನೆಲವನ್ನು ರಕ್ಷಿಸಿಕೊಳ್ಳಲು ಚೀನಾ ಏನು ಬೇಕಾದರೂ ಮಾಡುತ್ತದೆ ಎಂದು ಕಟ್ಟೆಚ್ಚರಿಕೆ ನೀಡಿದೆ.

ಈ ಹಿಂದೆಯೂ ಈ ವಿಚಾರದಲ್ಲಿ ಕಟುವಾಗಿ ಮಾತನಾಡಿದ್ದ ಚೀನಾ, 1962ರ ಯುದ್ಧವನ್ನು ಭಾರತ ಮರೆತಿದೆ ಎಂದು ಹಂಗಿಸಿತ್ತು. ಇದಕ್ಕೆ ಪ್ರತಿಯಾಗಿ ಅರುಣ್ ಜೇಟ್ಲಿಯವರು, ಈಗಿನ ಭಾರತವು 1962ರ ಭಾರತಕ್ಕಿಂತ ಭಿನ್ನವಾಗಿದೆ ಎಂದು ಟಾಂಗ್ ಕೊಟ್ಟಿದ್ದರು.

ಟಿಬೆಟ್-ಭೂತಾನ್-ಸಿಕ್ಕಿಂ ಮೂರೂ ಪ್ರದೇಶಗಳ ಗಡಿಗಳ ಸಂಗಮವಾಗುವ ಪ್ರದೇಶದಲ್ಲಿ ಈಗ ಚೀನಾ ಕ್ಯಾತೆ ತೆಗೆದಿರುವುದು. ಡೋಕ್ಲಾಮ್ ಎಂಬ ಈ ಪ್ರದೇಶದಲ್ಲಿ ಚೀನೀಯರು ಅತಿಕ್ರಮಿಸಿಕೊಂಡು ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದು ತನಗೆ ಸೇರಿದ್ದು ಎಂಬುದು ಭೂತಾನ್ ದೇಶದ ವಾದ. ಹಲವು ವರ್ಷಗಳಿಂದ ಇರುವ ವಿವಾದ ಇದಾಗಿದೆ. ವಿವಾದಿತ ಜಾಗವಾಗಿದ್ದರೂ ಚೀನೀಯರು ಅತಿಕ್ರಮಣ ಮಾಡುತ್ತಿರುವುದರಿಂದ ಭೂತಾನ್ ದೇಶವು ಭಾರತದ ನೆರವನ್ನ ಯಾಚಿಸಿದೆ. ಅನೇಕ ವರ್ಷಗಳಿಂದ ಈ ಪ್ರದೇಶವನ್ನು ಭಾರತ ಮತ್ತು ಭೂತಾನ್ ದೇಶದ ಭದ್ರತಾ ಪಡೆಗಳು ಜಂಟಿಯಾಗಿ ರಕ್ಷಣೆ ಮಾಡಿಕೊಂಡು ಬರುತ್ತಿವೆ. ಅಂತಾರಾಷ್ಟ್ರೀಯವಾಗಿ ಸಹಮತದಿಂದ ವಿವಾದ ಶಮನ ಆಗುವವರೆಗೂ ಯಾರೂ ಕೂಡ ಇಲ್ಲಿ ಅತಿಕ್ರಮಣ ಮಾಡುವುದಾಗಲೀ ಗಡಿ ರಚಿಸುವುದಾಗಲೀ ಮಾಡುವಂತಿಲ್ಲ. ಆದರೆ, ಚೀನಾ ಇವೆಲ್ಲವನ್ನೂ ಮೀರಿ, ಇದು ತನ್ನದೇ ಪ್ರದೇಶ ಎಂದು ಏಕಮುಖವಾಗಿ ಮಾತನಾಡುತ್ತಿದೆ. ಭೂತಾನ್ ಪರವಾಗಿ ಭಾರತ ವಕಾಲತು ವಹಿಸಿಕೊಂಡು ಚೀನಾವನ್ನು ಎದುರಿಸಲು ಸಜ್ಜಾಗಿದೆ. ಪ್ರದೇಶದ ಬಳಿಕ ಸಾಕಷ್ಟು ಸಂಖ್ಯೆಯಲ್ಲಿ ಚೀನೀ ಸೈನಿಕರು ಮತ್ತು ಭಾರತೀಯ ಸೈನಿಕರು ಮುಖಾಮುಖಿಯಾಗಿ ನಿಂತಿದ್ದಾರೆ.