ಬೀಜಿಂಗ್‌[ಮಾ.20]: ತಮ್ಮ ಉತ್ತರಾಧಿಕಾರಿಯನ್ನು ಭಾರತದಿಂದ ಆಯ್ಕೆ ಮಾಡಬೇಕು ಎಂದು ಬೌದ್ಧ ಧರ್ಮಗುರು ದಲೈಲಾಮಾ ಅವರ ಪ್ರಸ್ತಾವನೆಯನ್ನು ಚೀನಾ ತಿರಸ್ಕರಿಸಿದೆ. ಮುಂದಿನ ಟಿಬೆಟಿಯನ್‌ ಬೌದ್ಧಗುರುವನ್ನು ನೇಮಿಸಲು ತನ್ನ ಒಪ್ಪಿಗೆ ಪಡೆಯಬೇಕು ಎಂದು ದಲೈಲಾಮಾ ಅವರಿಗೆ ಎಚ್ಚರಿಕೆ ನೀಡಿದೆ.

ತಾವು ಸಾವನ್ನಪ್ಪಿದ ಬಳಿಕ ತಮ್ಮ ಉತ್ತರಾಧಿಕಾರಿ ಭಾರತದವರೇ ಆಗಿರಬೇಕು ಮತ್ತು ಚೀನಾ ಆಯ್ಕೆ ಮಾಡಿದ ಉತ್ತರಾಧಿಕಾರಿಯನ್ನು ಗೌರವಿಸುವುದಿಲ್ಲ ಎಂದು ದಲೈಲಾಮಾ ಸೋಮವಾರ ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿಕೆ ನೀಡಿದ್ದರು. ಆದರೆ, ಈ ಪ್ರಸ್ತಾವನೆಯನ್ನು ತಿರಸ್ಕರಿಸುವ ಚೀನಾ, ಟಿಬೆಟಿಯನ್‌ ಬೌದ್ಧಧರ್ಮದಲ್ಲಿ ಮರು ಹುಟ್ಟು ಎನ್ನುವುದು ವಿಶಿಷ್ಟವಾಗಿದೆ.

ನನ್ನ ಉತ್ತರಾಧಿಕಾರಿ ಭಾರತೀಯ: ದಲೈ ಲಾಮಾ ಹೇಳಿಕೆಯಿಂದ ದಂಗಾದ ಚೀನಾ!

ಅದಕ್ಕೆ ತನ್ನದೇ ಆದ ಸಂಪ್ರದಾಯ ಮತ್ತು ವ್ಯವಸ್ಥೆಗಳಿವೆ. ಚೀನಾ ಸರ್ಕಾರ ಧಾರ್ಮಿಕ ನಂಬಿಕೆಯ ಸ್ವಾತಂತ್ರ್ಯವನ್ನು ಕಲ್ಪಿಸಿದೆ. ನಾವು ಧಾರ್ಮಿಕ ವ್ಯವಹಾರಗಳಿಗೆ ನಿಯಮಾವಳಿಗಳನ್ನು ಹೊಂದಿದ್ದೇವೆ ಮತ್ತು ಉತ್ತರಾಧಿಕಾರಿಯ ನೇಮಕಕ್ಕೆ ನಮ್ಮದೇ ಆದ ವ್ಯವಸ್ಥೆಯನ್ನು ಹೊಂದಿದ್ದೇವೆ ಎಂದು ಚೀನಾ ವಿದೇಶಾಂಗ ಸಚಿವಾಲಯ ತಿಳಿಸಿದೆ.