ಸ್ವಿಜರ್ಲೆಂಡ್‌ ರಾಜಧಾನಿ ಬರ್ನ್‌ ನ ಲ್ಲಿ ನಡೆಯುತ್ತಿರುವ ಪರಮಾಣು ಪೂರೈಕೆದಾರರ ಗುಂಪು (ಎನ್‌ಎಸ್‌ಜಿ) ಸದಸ್ಯ ರಾಷ್ಟ್ರಗಳ ಸಭೆ ಯಲ್ಲಿ ಭಾರತದ ಎನ್‌ಎಸ್‌ಜಿ ಸದಸ್ಯತ್ವಕ್ಕೆ ಚೀನಾ ಮತ್ತೆ ಅಡ್ಡಗಾಲು ಹಾಕಿದೆ.
ಎನ್ಎಸ್ಜಿಯಲ್ಲಿ ಭಾರತಕ್ಕೆ ನೀಡುವ ಸದಸ್ಯತ್ವವನ್ನು ಸಭೆಯಲ್ಲಿ ವಿರೋಧಿಸುವುದಾಗಿ ಚೀನಾ ಗುರುವಾರ ಹೇಳಿದೆ.
ಪರಮಾಣು ಪ್ರಸರಣ ತಡೆ ಒಪ್ಪಂದಕ್ಕೆ ಸಹಿ ಹಾಕದ ರಾಷ್ಟ್ರಗಳಿಗೆ ಸದಸ್ಯತ್ವ ನೀಡಬಾರದು ಎಂಬ ನಿಲುವಿಗೆ ಚೀನಾ ಈಗಲೂ ಬದ್ಧವಾಗಿದೆ. ಸೋಲ್ನಲ್ಲಿ ನಡೆದ ಸಭೆಯ ವೇಳೆ ಈ ವಿಷಯವಾಗಿ ನಿರ್ಣಯ ಅಂಗೀಕರಿಸಲಾಗಿದೆ ಎಂದು ಚೀನಾ ವಿದೇಶಾಂಗ ವಕ್ತಾರ ಹೇಳಿದ್ದಾರೆ.
