ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಅರುಣಾಚಲ ಪ್ರದೇಶಕ್ಕೆ  ಭೇಟಿ ನೀಡಿರುವುದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ.

ಬೀಜಿಂಗ್: ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವುದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ.

ನಿರ್ಮಲಾ ಸೀತರಾಮನ್ ವಿವಾದಿತ ಸ್ಥಳಕ್ಕೆ ಭೇಟಿ ನೀಡಿರುವುದು ಪ್ರಾದೇಶಿಕ ಶಾಂತಿಗೆ ಪೂರಕವಲ್ಲ ಎಂದು ಚೀನಾ ಹೇಳಿದೆ.

ಅರುಣಾಚಲ ಪ್ರದೇಶಕ್ಕೆ ಭಾರತೀಯ ರಕ್ಷಣಾ ಸಚಿವರ ಭೇಟಿಯ ಕುರಿತು ಹೇಳುವುದಾದರೆ, ಚೀನಾದ ನಿಲುವಿನ ಬಗ್ಗೆ ಸ್ಪಷ್ಟತೆ ಹೊಂದಿರಬೇಕು. ಪೂರ್ವ ಚೀನಾ ಹಾಗೂ ಭಾರತದ ಗಡಿ ಪ್ರದೇಶಕ್ಕೆ ಸಂಬಂಧಿಸಿ ವಿವಾದವಿದೆ. ಆದುದರಿಂದ ಅಂತಹ ಕಡೆ ಭಾರತದ ರಕ್ಷಣಾ ಮಂತ್ರಿಯು ಭೇಟಿ ನೀಡುವುದು ಪ್ರಾದೇಶಿಕ ಶಾಂತಿಯ ದೃಷ್ಟಿಯಿಂದ ಸಮಂಜಸವಲ್ಲ, ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರೆ ಹುವಾ ಚುನ್ಯಿಂಗ್ ಹೇಳಿದ್ದಾರೆ.

ಅರುಣಾಚಲ ಪ್ರದೇಶದ ಅಂಜ್ವಾ ಜಿಲ್ಲೆಗೆ ನಿನ್ನೆ ನಿರ್ಮಲಾ ಸೀತರಾಮನ್ ಭೇಟಿ ನೀಡಿದ್ದರು.