ಹಿರಿಯರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಿರಿಯರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ಚೀನಾ ಶೀಘ್ರವೇ ದಂಪತಿಯೊಂದು ಮೂರು ಮಕ್ಕಳನ್ನು ಹೊಂದಬಹು ದಾದ ಹೊಸ ನೀತಿ ಜಾರಿಗೊಳಿಸುವ ಸಾಧ್ಯತೆಯಿದೆ.
ಬೀಜಿಂಗ್: ಜಗತ್ತಿನಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಚೀನಾದಲ್ಲಿ ಈಗ ಮಕ್ಕಳ ನಿಯಂತ್ರಣ ನೀತಿ ಸಡಿಲಗೊಳಿಸುವ ಸಂದೇಹ ವ್ಯಕ್ತವಾಗಿದೆ. ಹಿರಿಯರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಿರಿಯರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ಚೀನಾ ಶೀಘ್ರವೇ ದಂಪತಿಯೊಂದು ಮೂರು ಮಕ್ಕಳನ್ನು ಹೊಂದಬಹು ದಾದ ಹೊಸ ನೀತಿ ಜಾರಿಗೊಳಿಸುವ ಸಾಧ್ಯತೆಯಿದೆ.
ಜನಸಂಖ್ಯೆ ನಿಯಂತ್ರಣಕ್ಕಾಗಿ ಹಲವು ದಶಕಗಳ ಹಿಂದೆ ಜಾರಿಯಾಗಿದ್ದ ಒಂದು ಮಗುವಿನ ನೀತಿಯನ್ನು 2016 ರಲ್ಲೇ ಚೀನಾ ಕೈಬಿಟ್ಟಿದೆ. ಅದೇ ವರ್ಷ ಎರಡು ಮಕ್ಕಳನ್ನು ಹೊಂದಲು ಅವಕಾಶ ನೀಡಿತ್ತು. ಇದೀಗ, ಚೀನಾ ಅಂಚೆ ಇಲಾಖೆ ಬಿಡುಗಡೆ ಮಾಡಿರುವ 2019 ರ ಹಂದಿ ಸ್ಟಾಂಪ್‌ನಲ್ಲಿ, ಮೂರು ಹಂದಿ ಮರಿಗಳುಳ್ಳ ಸಂತುಷ್ಟ ಹಂದಿ ಕುಟುಂಬದ ಚಿತ್ರ ಪ್ರಕಟಿಸಲಾಗಿದೆ.
2016 ರಲ್ಲಿ ಎರಡು ಮಕ್ಕಳ ನೀತಿ ಜಾರಿಗೊಳಿಸುವುದಕ್ಕೂ ಮುನ್ನಾ ಎರಡು ಮರಿ ಕೋತಿಗಳ ಚಿತ್ರವುಳ್ಳ ಸ್ಟಾಂಪ್ ಪ್ರಕಟಿಸಲಾಗಿತ್ತು. ಹೀಗಾಗಿ, ಈಗ ಚೀನಾ ಮೂರು ಮಕ್ಕಳ ನೀತಿಯತ್ತ ಸಾಗಲಿದೆಯೇ ಎಂಬ ಪ್ರಶ್ನೆ ಮೂಡಿದೆ.
