ಕಳೆದ ತಿಂಗಳು ಭಾರತ ಸರ್ಕಾರದ ಉನ್ನತ ಮಟ್ಟದ ರಹಸ್ಯ ಸಭೆಯೊಂದು ‘ವಿಡಿಯೋ ಕಾನ್ಫರೆನ್ಸ್’ ಮೂಲಕ ನಡೆಯುತ್ತಿರುವ ಸಂದರ್ಭ ದಲ್ಲಿ ಚೀನಾದ ಹ್ಯಾಕರ್‌ಗಳು, ಈ ಸಭೆಯ ವಿಡಿಯೋ ಲಿಂಕನ್ನು ಹ್ಯಾಕ್ ಮಾಡಿದ ಘಟನೆ ನಡೆದಿದೆ.
ನವದೆಹಲಿ: ಕಳೆದ ತಿಂಗಳು ಭಾರತ ಸರ್ಕಾರದ ಉನ್ನತ ಮಟ್ಟದ ರಹಸ್ಯ ಸಭೆಯೊಂದು ‘ವಿಡಿಯೋ ಕಾನ್ಫರೆನ್ಸ್’ ಮೂಲಕ ನಡೆಯುತ್ತಿರುವ ಸಂದರ್ಭ ದಲ್ಲಿ ಚೀನಾದ ಹ್ಯಾಕರ್ಗಳು, ಈ ಸಭೆಯ ವಿಡಿಯೋ ಲಿಂಕನ್ನು ಹ್ಯಾಕ್ ಮಾಡಿದ ಘಟನೆ ನಡೆದಿದೆ.
ಸುಮಾರು 4-5 ನಿಮಿಷಗಳ ಕಾಲ ಸಭೆಯ ವಿಡಿಯೋ ಲಿಂಕ್, ಹ್ಯಾಕರ್ಗಳ ನಿಯಂತ್ರಣದಲ್ಲಿತ್ತು. ಕೂಡಲೇ ಇದನ್ನು ಅರಿತ ಭಾರತ ಸರ್ಕಾರದ ಸೈಬರ್ ತಜ್ಞರು ಸಂಪರ್ಕ ಕಡಿತಗೊಳಿಸಿದರು ಎಂದು ಗೊತ್ತಾಗಿದೆ.
‘ಅಕ್ಟೋಬರ್ನಲ್ಲಿ ಈ ರಹಸ್ಯ ಸಭೆ ನಡೆಯುತ್ತಿತ್ತು. ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಯುತ್ತಿರುವಾಗ ಚೀನೀ ಹ್ಯಾಕರ್ಗಳು ಇದಕ್ಕೆ ಕನ್ನ ಹಾಕಿದ್ದಾರೆ. ಭಾರತದ ಸೈಬರ್ ನಿಗಾ ಘಟಕವು ಇದನ್ನು ಪತ್ತೆ ಮಾಡಿತು.
ಅಷ್ಟೊತ್ತಿಗಾಗಲೇ ಸಭೆಯ ಎಲ್ಲ ಮಾಹಿತಿಯನ್ನು ಹ್ಯಾಕರ್ಗಳು ಕದ್ದಿದ್ದರು’ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
