ನವದೆಹಲಿ: ಭಾರತ ಮತ್ತು ಚೀನಾ ನಡುವೆ 73 ದಿನಗಳ ಕಾಲ ಶೀತಲ ಸಮರಕ್ಕೆ ಕಾರಣವಾಗಿದ್ದ ವಿವಾದಿತ ಡೋಕ್ಲಾಂ ಪ್ರದೇಶದಲ್ಲಿ ಚೀನಾ ಮತ್ತೆ ದೊಡ್ಡ ಪ್ರಮಾಣದಲ್ಲಿ ತನ್ನ ಸೇನೆ ನಿಯೋಜಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸಿಕ್ಕಿಂ-ಭೂತಾನ್ ಮತ್ತು ಟಿಬೆಟ್‌ಗಳ ಗಡಿಯಲ್ಲಿರುವ ಡೋಕ್ಲಾಂ ಪ್ರದೇಶದಲ್ಲಿ ಚೀನಾ ಸೋಮವಾರ ಸುಮಾರು 1600-1800 ಸೈನಿಕರನ್ನು ಶಾಶ್ವತವಾಗಿ ನಿಯೋಜಿಸಿದೆ.

ಅಲ್ಲದೆ, ಎರಡು ಹೆಲಿಪಾಡ್, ರಸ್ತೆಗಳ ಅಭಿವೃದ್ಧಿ ಇತರ ಸೌಲಭ್ಯಗಳನ್ನು ನಿರ್ಮಿಸುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ಡೋಕ್ಲಾಂ ಪ್ರದೇಶದಲ್ಲಿ ರಸ್ತೆ ಅಭಿವೃದ್ಧಿಪಡಿಸುವ ಚೀನಾದ ಯತ್ನವನ್ನು ಭಾರತ ಯಶಸ್ವಿಯಾಗಿ, ತಡೆದಿತ್ತು.