ಬ್ರಹ್ಮಪುತ್ರ ನದಿ ತಿರುಗಿಸಲು 1000 ಕಿ.ಮೀ. ಉದ್ದದ ಸುರಂಗ ಮಾರ್ಗವನ್ನು ನಿರ್ಮಾಣ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾ, ಮಾಧ್ಯಮ ವರದಿಗಳನ್ನು ಆಧಾರರಹಿತ ಹಾಗೂ ಸತ್ಯಕ್ಕೆ ದೂರವಾದ್ದು ಎಂದು ಹೇಳಿದೆ.

ಬೀಜಿಂಗ್: ಬ್ರಹ್ಮಪುತ್ರ ನದಿ ತಿರುಗಿಸಲು 1000 ಕಿ.ಮೀ. ಉದ್ದದ ಸುರಂಗ ಮಾರ್ಗವನ್ನು ನಿರ್ಮಾಣ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾ, ಮಾಧ್ಯಮ ವರದಿಗಳನ್ನು ಆಧಾರರಹಿತ ಹಾಗೂ ಸತ್ಯಕ್ಕೆ ದೂರವಾದ್ದು ಎಂದು ಹೇಳಿದೆ.

ವಾಯವ್ಯ ಚೀನಾದಲ್ಲಿರುವ ಬರಪೀಡಿತ ಕ್ಸಿನ್‌'ಜಿಯಾಂಗ್ ಪ್ರಾಂತ್ಯಕ್ಕೆ ಬ್ರಹ್ಮಪುತ್ರ ನದಿ ತಿರುಗಿಸಲು ವಿಶ್ವದಲ್ಲೇ ಅತಿ ಉದ್ದವಾದ 1000 ಕಿ.ಮೀ. ಸುರಂಗ ಮಾರ್ಗವನ್ನು ನಿರ್ಮಾಣ ಮಾಡುವ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ಚೀನಾ ಜಾರಿಗೆ ತರುತ್ತಿದೆ ಎಂದು ವರದಿಯಾಗಿತ್ತು.

ಈ ವರದಿಯು ಆಧಾರರಹಿತವಾಗಿದ್ದು, ಸತ್ಯಕ್ಕೆ ದೂರವಾಗಿದೆ, ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರ ಹುವಾ ಚುನ್ಯಿಂಗ್ ಹೇಳಿದ್ದಾರೆ.

1000 ಕಿ.ಮೀ. ಸುರಂಗ ನಿರ್ಮಾಣದ ಸಾಮರ್ಥ್ಯ ಪರಿಶೀಲಿಸುವ ಸಲುವಾಗಿ ಸಣ್ಣ ಪ್ರಮಾಣದ ಯೋಜನೆಯನ್ನು ಚೀನಾ ಈಗಾಗಲೇ ‘ರಿಹರ್ಸಲ್’ ರೂಪದಲ್ಲಿ ಕೈಗೆತ್ತಿಕೊಂಡಿದ್ದು, ತನ್ನ ಯುನ್ನಾನ್ ಪ್ರಾಂತ್ಯದ ಮಧ್ಯಭಾಗದಿಂದ 600 ಕಿ.ಮೀ. ಉದ್ದದ ಸುರಂಗ ನಿರ್ಮಾಣವನ್ನು ಕಳೆದ ಆಗಸ್ಟ್‌'ನಲ್ಲೇ ಆರಂಭಿಸಿದೆ ಎಂದು 'ಚೀನಾ ಮಾರ್ನಿಂಗ್ ಪೋಸ್ಟ್’ ಪತ್ರಿಕೆ ವರದಿ ಮಾಡಿತ್ತು.

 ಚೀನಾದಲ್ಲಿ ಯಾರ್ಲುಂಗ್ ಸ್ಯಾಂಗ್'ಪೋ ಎಂದು ಕರೆಯಲಾಗುವ ಬ್ರಹ್ಮಪುತ್ರ ನದಿಯಿಂದ ಕ್ಸಿನ್‌'ಜಿಯಾಂಗ್ ಪ್ರಾಂತ್ಯಕ್ಕೆ ನೀರು ಒಯ್ಯುವ ತಂತ್ರವನ್ನು ಯುನ್ನಾನ್ ಯೋಜನೆ ಮೂಲಕ ಚೀನಿ ಎಂಜಿನಿಯರ್‌'ಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವರದಿಯು ಹೇಳಿತ್ತು.