Asianet Suvarna News Asianet Suvarna News

ಜಾಗತಿಕ ಉಗ್ರರ ಪಟ್ಟಿಗೆ ಮಸೂದ್ ಅಝರ್: ಭಾರತದ ಪ್ರಯತ್ನಕ್ಕೆ ಇನ್ನೊಮ್ಮೆ ತಡೆಯೊಡ್ಡಿದ ಚೀನಾ

ಪಾಕಿಸ್ತಾನದ ಜೈಶೆ ಮೊಹಮ್ಮದ್ ಸಂಘಟನೆ ಮುಖ್ಯಸ್ಥ  ಹಾಗೂ ಪಠಾಣ್’ಕೋಟ್ ವಾಯುನೆಲೆ ದಾಳಿಯ ಪ್ರಮುಖ ರೂವಾರಿ ಮಸೂದ್ ಅಝರ್’ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಪ್ರಕ್ರಿಯೆಗೆ ಚೀನಾ ಮತ್ತೊಮ್ಮೆ ತಡೆವೊಡ್ಡಿದೆ.

China again blocks move to list Masood Azhar as global terrorist

ವಿಶ್ವಸಂಸ್ಥೆ: ಪಾಕಿಸ್ತಾನದ ಜೈಶೆ ಮೊಹಮ್ಮದ್ ಸಂಘಟನೆ ಮುಖ್ಯಸ್ಥ  ಹಾಗೂ ಪಠಾಣ್’ಕೋಟ್ ವಾಯುನೆಲೆ ದಾಳಿಯ ಪ್ರಮುಖ ರೂವಾರಿ ಮಸೂದ್ ಅಝರ್’ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಪ್ರಕ್ರಿಯೆಗೆ ಚೀನಾ ಮತ್ತೊಮ್ಮೆ ತಡೆವೊಡ್ಡಿದೆ.

ಪ್ರಸ್ತಾವದ ಬಗ್ಗೆ ಸಹಮತವಿಲ್ಲದಿರುವ ಕಾರಣ ಚೀನಾ ಅದಕ್ಕೆ ತಡೆಯೊಡ್ಡಿದೆ ಎಂದು ಚೀನಾ ವಿದೇಶಾಂಗ ಇಲಾಖೆಯು ಹೇಳಿದೆಯೆಂದು ಪಿಟಿಐ ವರದಿ ಮಾಡಿದೆ.

ಪಾಕಿಸ್ತಾನದ ಪರವಾಗಿ ಚೀನಾವು ವೀಟೋ ಪ್ರಯೋಗಿಸಿದೆಯೇ ಎಂಬ ಪ್ರಶ್ನೆಗೆ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಹುವಾ ಚುನ್ಯಿಂಗ್, ಸಮಿತಿಯು ನೀತಿ-ನಿಯಮಗಳ ಅನುಗುಣವಾಗಿ ನಡೆಯಬೇಕು, ಯಾವುದೇ ರೀತಿಯ ಸಹಮತ ಹೊಂದಬೇಕಾದರೆ ಅದಕ್ಕೆ ಬಲವಾದ ಪುರಾವೆ ಕೂಡಾ ಇರಬೇಕು ಎಂದು ಹೇಳಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಅಮೆರಿಕಾ, ಬ್ರಿಟನ್ ಹಾಗೂ ಫ್ರಾನ್ಸ್’ಗಳು ಮಸೂದ್ ಅಝರ್’ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಭಾರತದ ಪ್ರಯತ್ನಕ್ಕೆ ಬೆಂಬಲಿಸಿದೆಯಾದರೂ, ಚೀನಾವು ಇನ್ನೊಮ್ಮೆ ವೀಟೋ ಪ್ರಯೋಗಿಸಿ, ಮೂರು ತಿಂಗಳಗಳ ಅವಧಿಗೆ ಪ್ರಸ್ತಾಪವನ್ನು ತಡೆಹಿಡಿದಿದೆ.

ಚೀನಾವು ತಡೆಯನ್ನು ವಿಸ್ತರಿಸದಿರುತ್ತಿದ್ದರೆ, ಮಸೂದ ಅಝರ್ ಹೆಸರು ತನ್ನಿಂತಾನೇ ಜಾಗತಿಕ ಉಗ್ರರ ಪಟ್ಟಿಯಲ್ಲಿ ಸೇರ್ಪಡೆಯಾಗುತ್ತಿತ್ತು. ಕಳೆದ ಆಗಸ್ಟ್, ಹಾಗೂ ಫೆಬ್ರವರಿಯಲ್ಲೂ ಚೀನಾವು ಈ ಪ್ರಸ್ತಾಪಕ್ಕೆ ತಡೆಯನ್ನೊಡ್ಡಿತ್ತು. ಆ ತಡೆಯ ಅವಧಿ ಇಂದು (ನ.2ಕ್ಕೆ) ಅಂತ್ಯಗೊಳ್ಳುವ ಬೆನ್ನಲ್ಲೆ ಚೀನಾ ಅದನ್ನು ಇನ್ನೂ 3 ತಿಂಗಳಗಳ ಅವಧಿಗೆ ಮುಂದುವರೆಸಿದೆ.

ಭದ್ರತಾ ಮಂಡಳಿಯ ಅಲ್-ಕಾಯ್ದ ನಿರ್ಬಂಧ ಸಮಿತಿಯ ಈ ಕ್ರಮವನ್ನು ಖುದ್ದು ಭದ್ರತಾ ಮಂಡಳಿಯ ಸದಸ್ಯನಾಗಿರುವ ಚೀನಾವು ಕಳೆದ ವರ್ಷದಿಂದಲೂ ವೀಟೋ ಪ್ರಯೋಗಿಸಿ ತಡೆಯುತ್ತಿದೆ.

ಕಳೆದ ವರ್ಷ ಮಾರ್ಚ್’ನಲ್ಲಿ ಜಾಗತಿಕ ಉಗ್ರರ ಪಟ್ಟಿಯಲ್ಲಿ ಮಸೂದ್ ಅಝರ್’ನನ್ನು ಸೇರಿಸುವ ಭಾರತದ ಪ್ರಯತ್ನವನ್ನು ಸಮಿತಿಯ  15 ಸದಸ್ಯ-ದೇಶಗಳ ಪೈಕಿ 14 ದೇಶಗಳು ಬೆಂಬಲಿಸಿದ್ದರೂ, ಚೀನಾವು ಅದನ್ನು 6 ತಿಂಗಳುಗಳ ಅವಧಿಗೆ ತಡೆದಿತ್ತು.

ಒಮ್ಮೆ ಮಸೂದ್ ಅಝರ್ ಹೆಸರು ಜಾಗತಿಕ ಉಗ್ರರ ಪಟ್ಟಿಯಲ್ಲಿ ಸೇರ್ಪಡೆಗೊಂಡರೆ ಆತನ ಆಸ್ತಿ-ಪಾಸ್ತಿಗಳನ್ನು ಮುಟ್ಟುಗೋಲು ಹಾಕಬಹುದಲ್ಲದೇ, ಆತನ ಪ್ರವಾಸಗಳ ನಿರ್ಬಂಧ ಹೇರಬಹುದಾಗಿದೆ.

 

Follow Us:
Download App:
  • android
  • ios