Asianet Suvarna News Asianet Suvarna News

(ವಿಡಿಯೋ) ಸಿಟ್ಟಿಗೆದ್ದ ಗಂಡಾನೆ ಮರಿಯಾನೆಯನ್ನು ಸೊಂಡಿಲಿನಿಂದ ಎಸೆಯುವುದನ್ನು ನೋಡಿದರೆ ಮೈ ಜುಂ ಎನ್ನುವುದು ಗ್ಯಾರಂಟಿ!

ಆನೆಗಳಿಗೆ ಕೋಪ ಬಂದರೆ ಏನೆಲ್ಲಾ ಮಾಡುತ್ತವೆ ಎನ್ನುವುದನ್ನು ನಾವು ಆಗಾಗ ನೋಡುತ್ತಿರುತ್ತೇವೆ. ಮದವೇರಿದ ಗಜವನ್ನು ತಡೆಯೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಅದರಲ್ಲೂ ಗುಂಪಿನಲ್ಲಿದ್ದಾಗ ಅವುಗಳ ಶಕ್ತಿ-ಸಾಮರ್ಥ್ಯ ಇನ್ನೂ ಹೆಚ್ಚಾಗಿರುತ್ತದೆ. ಈ ವಿಡಿಯೋದಲ್ಲಿ ದೊಡ್ಡ  ಆನೆಯು ಮರಿ ಆನೆಯೊಂದನ್ನು ಸೊಂಡಿಲಲ್ಲಿ ಎತ್ತಿ ಎಸೆಯುವುದನ್ನು ನೋಡಿದರೆ ಮೈ ಜುಂ ಎನ್ನುತ್ತದೆ. ಮೂರು ಬಾರಿ ಎಸೆಯುತ್ತದೆ. ಒಂದು ಬಾರಿ ಮಾತ್ರ ಮರಿ ಆನೆಗೆ ಎದ್ದೇಳಲು ಸಹಾಯ ಮಾಡುತ್ತದೆ. ಥ್ಯಾಂಕ್ ಗಾಡ್, ಆನೆ ಮರಿಗೆ ಯಾವುದೇ ಗಾಯಗಳಾಗುವುದಿಲ್ಲ.

Chilling Video Shows Baby Elephant Tossed Aside By Bull Elephant
  • Facebook
  • Twitter
  • Whatsapp

ಆನೆಗಳಿಗೆ ಕೋಪ ಬಂದರೆ ಏನೆಲ್ಲಾ ಮಾಡುತ್ತವೆ ಎನ್ನುವುದನ್ನು ನಾವು ಆಗಾಗ ನೋಡುತ್ತಿರುತ್ತೇವೆ. ಮದವೇರಿದ ಗಜವನ್ನು ತಡೆಯೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಅದರಲ್ಲೂ ಗುಂಪಿನಲ್ಲಿದ್ದಾಗ ಅವುಗಳ ಶಕ್ತಿ-ಸಾಮರ್ಥ್ಯ ಇನ್ನೂ ಹೆಚ್ಚಾಗಿರುತ್ತದೆ. ಈ ವಿಡಿಯೋದಲ್ಲಿ ದೊಡ್ಡ  ಆನೆಯು ಮರಿ ಆನೆಯೊಂದನ್ನು ಸೊಂಡಿಲಲ್ಲಿ ಎತ್ತಿ ಎಸೆಯುವುದನ್ನು ನೋಡಿದರೆ ಮೈ ಜುಂ ಎನ್ನುತ್ತದೆ. ಮಿಲನದ ಸಂದರ್ಭದಲ್ಲಿ ಅಡ್ಡ ಬಂದಿತೆಂಬ ಕಾರಣಕ್ಕೆ ಕೋಪಗೊಂಡ ಗಂಡಾನೆ ಮರಿ ಆನೆಯನ್ನು 3 ಬಾರಿ ಎಸೆಯುತ್ತದೆ. ಒಂದು ಬಾರಿ ಮಾತ್ರ ಮರಿ ಆನೆಗೆ ಎದ್ದೇಳಲು ಸಹಾಯ ಮಾಡುತ್ತದೆ. ಥ್ಯಾಂಕ್ ಗಾಡ್, ಆನೆ ಮರಿಗೆ ಯಾವುದೇ ಗಾಯಗಳಾಗುವುದಿಲ್ಲ.

ಆಫ್ರಿಕಾದ ಆ್ಯಡೋ ಎಲಿಫೆಂಟ್ ನ್ಯಾಷನಲ್ ಪಾರ್ಕ್ ನಲ್ಲಿ ಈ ಘಟನೆ ನಡೆದಿದೆ. ಫೇಸ್ ಬುಕ್ ಒಂದರಲ್ಲೇ 7 ಸಾವಿರ ಸಲ ಜನ ನೋಡಿದ್ದಾರೆ. ಬಹಳಷ್ಟು ಮಂದಿ ಬೇಸರ ವ್ಯಕ್ತಪಡಿಸಿದ್ದಾರೆ. ನೇಚರ್ ಗೈಡ್ ಜೆನಿ ಸ್ಮಿತಿಸ್ ಹಾಗೂ ಫೋಟೋಗ್ರಾಫರ್ ಲಾಯಿಡ್ ಕಾರ್ಟರ್ ಈ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ. ನೀವೂ ನೋಡಿ ಮೈ ಜುಂ ಎನಿಸುವ ಈ ವಿಡಿಯೋವನ್ನು

 

ವರದಿ: ಎನ್'ಡಿಟಿವಿ

Follow Us:
Download App:
  • android
  • ios