ಮೈಸೂರಿನಲ್ಲಿ ಮತ್ತೊಂದು ಮಕ್ಕಳ ಮಾರಾಟ ಜಾಲ ಬಯಲಾಗಿದೆ. ಅದೂ ತನ್ನ ಹೆತ್ತ ತಾಯಿಯಿಂದಲೇ ಈ ಕೃತ್ಯ ನಡೆದಿರುವುದು ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಮೈಸೂರು(ಫೆ.02): ಮೈಸೂರಿನಲ್ಲಿ ಮತ್ತೊಂದು ಮಕ್ಕಳ ಮಾರಾಟ ಜಾಲ ಬಯಲಾಗಿದೆ. ಅದೂ ತನ್ನ ಹೆತ್ತ ತಾಯಿಯಿಂದಲೇ ಈ ಕೃತ್ಯ ನಡೆದಿರುವುದು ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಎಚ್.ಡಿ.ಕೋಟೆ ತಾ. ಕೈಲಾಸಪುರ, ಭೀಮನಹಳ್ಳಿಯಲ್ಲಿ 3 ವರ್ಷದ ಮತ್ತು 7 ವರ್ಷದ ಅಕ್ಕ, ತಂಗಿಯರನ್ನೇ ತಾಯಿ ಮಾರಾಟಕ್ಕಿಟ್ಟ ಘಟನೆ ಬೆಳಕಿಗೆ ಬಂದಿದೆ. ತಮಿಳುನಾಡು ಮೂಲದ ಮಹೇಂದ್ರ ಕುಮಾರ್ ಹಾಗೂ ಕೊಡಗು ಮೂಲದ ಮತ್ತಣ್ಣ ಎಂಬುವರಿಗೆ ಮಕ್ಕಳನ್ನು ಮಾರಿದ್ದಳು ಎನ್ನಲಾಗಿದೆ.
ಮಹಿಳಾ ಸಾಂತ್ವನ ಕೇಂದ್ರದವರಿಂದ ಸದ್ಯ ಮಕ್ಕಳನ್ನ ರಕ್ಷಿಸಲಾಗಿದೆ. ಹೆಣ್ಮಕ್ಕಳನ್ನು ಸಾಕಲಾಗದೆ ತಾಯಿ ರಂಜಿತಾ ಮಕ್ಕಳನ್ನು ಮಾರಾಟ ಮಾಡಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ. ಘಟನೆ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
