Asianet Suvarna News Asianet Suvarna News

ಮೈಸೂರಲ್ಲಿ ಮೂವರು ಮಕ್ಕಳ ಅಪಹರಣ: ಕೆಲವೇ ಗಂಟೆಗಳಲ್ಲಿ ಪತ್ತೆ

ಯಾಸೀನ್, ಅನ್ನಾನ್, ಮುನ್ನಾನ್ ಅಪಹರಣವಾಗಿದ್ದ ಮಕ್ಕಳು. ಮನೆಮುಂದೆ ಆಟವಾಡುತ್ತಿದ್ದ ಮಕ್ಕಳನ್ನು ಪುಸಲಾಯಿಸಿ ಕಿಡ್ನ್ಯಾಪ್ ಮಾಡಲಾಗಿತ್ತು.

Children kidnap at mysore
  • Facebook
  • Twitter
  • Whatsapp

ಮೈಸೂರು(ಜೂ.24): ನಗರದಲ್ಲಿ ಹಾಡಹಗಲೇ ಮೂವರು ಮಕ್ಕಳ ಅಪಹರಣವಾಗಿದ್ದು, ಕೆಲವೇ ಗಂಟೆಯಲ್ಲಿ ಪತ್ತೆಯಾಗಿದ್ದಾರೆ.

ಯಾಸೀನ್, ಅನ್ನಾನ್, ಮುನ್ನಾನ್ ಅಪಹರಣವಾಗಿದ್ದ ಮಕ್ಕಳು. ಮನೆಮುಂದೆ ಆಟವಾಡುತ್ತಿದ್ದ ಮಕ್ಕಳನ್ನು ಪುಸಲಾಯಿಸಿ ಕಿಡ್ನ್ಯಾಪ್ ಮಾಡಲಾಗಿತ್ತು. ಅಪಹರಣಕಾರರು ಮೊದಲು ನಾಲ್ವರು ಮಕ್ಕಳನ್ನು ಅಪಹರಿಸಿದ್ದರು. ಇವರಲ್ಲಿ ರೆಹಾನ್ ಎಂಬಾತ ತಪ್ಪಿಸಿಕೊಂಡು ಅಪಹರಣದ ಬಗ್ಗೆ ಮಾಹಿತಿ ನೀಡಿದ್ದಾನೆ. ತದ ನಂತರ ಪೊಲೀಸರು ನಂಜನಗೂಡಿನಲ್ಲಿ ಮಕ್ಕಳನ್ನು ಪತ್ತೆ ಮಾಡಿದ್ದಾರೆ. ಪೋಷಕರು ತಮ್ಮ ಮಕ್ಕಳ ಜೊತೆ ಮಾತನಾಡಿದ್ದು, ಅಪಹರಣ ಸುಖಾಂತ್ಯಗೊಂಡಿದೆ. ಅಜೀಜ್ ಸೇಠ್ ನಗರ, ಶಾಂತಿನಗರ, ಗೌಸಿಯಾ ನಗರದವರಾಗಿದ್ದರು. ಅಪಹರಣಕಾರರ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ನಿರೀಕ್ಷಿಸುತ್ತಿದ್ದಾರೆ.

Follow Us:
Download App:
  • android
  • ios