ಪಾಟ್ನಾ : ರಾಜ್ಯದಲ್ಲಿ ಹಿರಿಯ ನಾಗರಿಕರಿಗೆ ಬಿಗ್ ರಿಲೀಫ್  ನೀಡುವ ಯೋಜನೆಯೊಂದು ಜಾರಿಯಾಗುತ್ತಿದೆ. ಸಿಎಂ ನಿತೀಶ್ ಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಯಾವ ಮಕ್ಕಳು ತಮ್ಮ ಪೋಷಕರನ್ನು ನೋಡಿಕೊಳ್ಳುವುದಿಲ್ಲವೋ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

ಬಿಹಾರ ಸಂಪುಟ ಸಭೆಯಲ್ಲಿ ಒಟ್ಟು 17 ಪ್ರಸ್ತಾವನೆಗಳನ್ನು ಇಡಲಾಗಿದ್ದು, ಅದರಲ್ಲಿ ಪ್ರಮುಖವಾಗಿ ಹಿರಿಯ ನಾಗರಿಕ ಪರವಾಗಿ ಅವರನ್ನು ನೋಡಿಕೊಳ್ಳದಿದ್ದಲ್ಲಿ ಮಕ್ಕಳಿಗೆ ಜೈಲು ಶಿಕ್ಷೆವಿಧಿಸಬಹುದಾದ ಪ್ರಸ್ತಾವನೆಗೆ ಅಂಕಿತ ನೀಡಲಾಗಿದೆ. 

ತಮ್ಮ ಮಕ್ಕಳು ನೋಡಿಕೊಳ್ಳುವುದಿಲ್ಲ ಎಂದು ಪೋಷಕರು ದೂರು ದಾಖಲಿಸಿದಲ್ಲಿ ಮಕ್ಕಳಿಗೆ ಈ ಪ್ರಸ್ತಾವನೆ ಅಡಿಯಲ್ಲಿ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ.

ಸೂಕ್ತ ರೀತಿಯ ವಾತಾವರಣ ಕಲ್ಪಿಸಿ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಅತ್ಯಗತ್ಯವಾಗಿರುತ್ತದೆ. ಹಿರಿಯ ನಾಗರಿಕರ ರಕ್ಷಣೆಗಾಗಿ ಸಂಪುಟದಲ್ಲಿ ಪ್ರಸ್ತಾವನೆ ಒಪ್ಪಿಗೆ  ಪಡೆದಿದ್ದು, ಅಧಿಕೃತವಾಗಿ ಜಾರಿಯಾಗಲು ಅಂತಿಮ ಹಂತದ ಪ್ರಕ್ರಿಯೆಯೊಂದು ಬಾಕಿ ಉಳಿದಿದೆ.

ಈ ಪ್ರಸ್ತಾವನೆಯನ್ನು ಜಾರಿಗೆ ತರುವುದು ಅತ್ಯಂತ ಅಗತ್ಯವಾಗಿದ್ದು ಇಂದಿನ ದಿನಮಾನಗಳಲ್ಲಿ ಪೋಷಕರು ಮಕ್ಕಳಿಂದ ನಿರ್ಲಕ್ಷಿರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.