* ಉತ್ತರಪ್ರದೇಶದಲ್ಲಿ ಮತ್ತೆ 49 ಮಕ್ಕಳು ಸಾವು * ಫರೂಖಾಬಾದ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ದುರ್ಘಟನೆ* ಸೂಕ್ತ ಆಕ್ಸಿಜನ್ ಸಿಗದೆ ಮತ್ತೆ 49 ಮಕ್ಕಳು ಸಾವು * ಕಳೆದ 1 ತಿಂಗಳಲ್ಲಿ ಒಟ್ಟು 49 ಮಕ್ಕಳು ದುರ್ಮರಣ* ಗೋರಖ್'ಪುರದ ದುರ್ಘಟನೆಯ ಬೆನ್ನಲ್ಲೆ ಮತ್ತೊಂದು ದುರಂತ* ಮೆದುಳುಜ್ವರದಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ಮಕ್ಕಳು
ಲಕ್ನೋ(ಸೆ. 04): ಉತ್ತರ ಪ್ರದೇಶದಲ್ಲಿ ಮಕ್ಕಳು ಮರಣಮೃದಂಗ ಮುಂದುವರಿದಿದೆ. ಗೋರಖ್'ಪುರ ಸರ್ಕಾರಿ ಆಸ್ಪತ್ರೆಯಲ್ಲಿ 63 ಮಕ್ಕಳ ಸರಣಿ ಸಾವಿನ ದುರಂತದ ನೋವು ಮರೆಯುವ ಮುನ್ನವೇ ರಾಜ್ಯದ ಮತ್ತೊಂದು ಸರಕಾರೀ ಆಸ್ಪತ್ರೆಯಲ್ಲಿ ಮಕ್ಕಳು ಸಾಲುಸಾಲಾಗಿ ಮರಣ ಹೊಂದಿರುವ ಘಟನೆ ಬೆಳಕಿಗೆ ಬಂದಿದೆ. ಫಾರೂಕಾಬಾದ್ ಜಿಲ್ಲೆಯ ಸರಕಾರಿ ಆಸ್ಪತ್ರೆಯಲ್ಲಿ ಒಂದು ತಿಂಗಳ ಅವಧಿಯಲ್ಲಿ 49 ಹಸುಗೂಸುಗಳು ಮೃತಪಟ್ಟಿವೆ. ಆಕ್ಸಿಜನ್ ಪ್ರಮಾಣ ಕಡಿಮೆ ಇದ್ದದ್ದೇ ಈ ದುರಂತಕ್ಕೆ ಕಾರಣ ಎಂಬ ವಿಷಯವು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಫಾರೂಖಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದ್ರಕುಮಾರ್ ಅವರು ತನಿಖೆಗೆ ಆದೇಶಿಸಿದ್ದಾರೆ. ಆಕ್ಸಿಜನ್ ವ್ಯವಸ್ಥೆ ಸಮರ್ಪಕರವಾಗಿರುವುದನ್ನು ಖಾತ್ರಿಪಡಿಸಿಕೊಳ್ಳಲು ವಿಫಲರಾದ ಮುಖ್ಯ ವೈದ್ಯಾಧಿಕಾರಿ ಹಾಗೂ ಮುಖ್ಯ ವೈದ್ಯಕೀಯ ಅಭಿಯಂತರರ ವಿರುದ್ಧ ಪೊಲೀಸರು ಎಫ್'ಐಆರ್ ದಾಖಲಿಸಿದ್ದಾರೆ.
ಉತ್ತರಪ್ರದೇಶ ಮುಖ್ಯಂತ್ರಿ ಯೋಗಿ ಆದಿತ್ಯನಾಥ್ ಅವರ ಮೇಲೆ ಇನ್ನಷ್ಟು ಒತ್ತಡ ಬಿದ್ದಂತಾಗಿದೆ. ಗೋರಖ್'ಪುರದ ಬಿಆರ್'ಡಿ ಆಸ್ಪತ್ರೆಯಲ್ಲಿ 63 ಹಸುಳೆಗಳು ಮೃತಪಟ್ಟಿದ್ದವು. ಅಲ್ಲಿಯೂ ಕೂಡ ಆಮ್ಲಜನಕದ ಕೊರತೆಯೇ ಈ ದುರಂತಕ್ಕೆ ಕಾರಣವಾಗಿತ್ತು. ಆಕ್ಸಿಜನ್'ನ ಪೂರೈಕೆದಾರರು ತಮಗೆ ಬರಬೇಕಾದ ಬಾಕಿ ಹಣ ಬಂದಿಲ್ಲವೆಂದು ಅನೇಕ ಬಾರಿ ಆಸ್ಪತ್ರೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಇದಕ್ಕೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಆನಂತರ ಆಕ್ಸಿಜನ್ ಪೂರೈಕೆ ನಿಂತು ಹೋಗಿತ್ತು. ಇದು ಮಕ್ಕಳ ಸಾವಿಗೆ ಮರಣಮೃದಂಗವಾಯಿತು.
