Asianet Suvarna News Asianet Suvarna News

ಹಾಸನದಲ್ಲಿ ನಡೆದಿದೆ ರಾಜ್ಯವನ್ನು ಬೆಚ್ಚಿಬೀಳಿಸುವ ಘಟನೆ

ದರೆ 6 ತಿಂಗಳಾದರೂ ಮನೆಗೆ ವಾಪಸ್​​ ಆಗಲಿಲ್ಲ. ಒಂದೂವರೆ ತಿಂಗಳ ಹಿಂದೆ ಬಾಲಕಿಯೇ ತಾಯಿಗೆ ಕರೆ ಮಾಡಿದ್ದಳು.

Child Trafficking at Hasan

ಹಾಸನ(ಮೇ.06): ಜಿಲ್ಲೆಯಲ್ಲಿ ಮಕ್ಕಳ ಮಾರಾಟ ಜಾಲ ಬಯಲಾಗಿದೆ. ಅರಸೀಕೆರೆಯ ಲೇಡಿ ಗ್ಯಾಂಗೊಂದು ಮಕ್ಕಳ ಮಾರಾಟ ಮಾಡೋ ದಂಧೆಯಲ್ಲಿ ತೊಡಗಿದೆ. ಅರಸೀಕೆರೆಯ ಬಡ ಕುಟುಂಬದ ಬಾಲಕಿಯನ್ನು ಪಕ್ಕದ ಮನೆಯವಳೇ ರಾಜಸ್ಥಾನಕ್ಕೆ, 3 ಲಕ್ಷ ಹಣಕ್ಕೆ ಮಾರಾಟ ಮಾಡಿದ್ದಳು. 2016ರ ಸೆಪ್ಟೆಂಬರ್ 29ರಂದು ಬಾಲಕಿ ನಾಪತ್ತೆಯಾಗಿದ್ದಳು. ಎಲ್ಲೊ ಇದ್ದಾಳೆ, ಬರಬಹುದೆಂದು ತಾಯಿ ಕಾದಿದ್ದಳು. ಆದರೆ 6 ತಿಂಗಳಾದರೂ ಮನೆಗೆ ವಾಪಸ್​​ ಆಗಲಿಲ್ಲ. ಒಂದೂವರೆ ತಿಂಗಳ ಹಿಂದೆ ಆ ಬಾಲಕಿಯೇ ತಾಯಿಗೆ ಕರೆ ಮಾಡಿದ್ದಳು. ನಂತರ ಮಹಿಳಾ ಮತ್ತು ಮಕ್ಕಳ ಮಾರಾಟ ತಡೆ ಸಮಿತಿಗೆ ತಾಯಿ ದೂರು ನೀಡಿದ್ದಳು. ಆ ದೂರಿನನ್ವಯ ಹಾಸನ ಪೊಲೀಸರು ಬಾಲಕಿ ಇರಿಸಿದ್ದ ಜಾಡು ಹಿಡಿದು ಬಾಲಕಿಯನ್ನು ರಕ್ಷಿಸಿ ಹಾಸನಕ್ಕೆ ಕರೆ ತಂದಿದ್ದಾರೆ. ದುರಂತ ಅಂದರೆ, ಮಾರಾಟ ಮಾಡಿದ ಮಹಿಳೆ, ಈ ಬಾಲಕಿಯನ್ನು ರಾಜಸ್ಥಾನದಲ್ಲಿ ಲಾರಿ ಚಾಲಕನ ಜೊತೆ ಮದುವೆ ಮಾಡಿಸಿದ್ದಾಳೆ. ಸದ್ಯ ಆಕೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಬಾಲಮಂದಿರದಲ್ಲಿ ಆರೈಕೆ ಮಾಡಲಾಗುತ್ತಿದೆ.

Follow Us:
Download App:
  • android
  • ios