ಮಗುವಿಗೆ ಕೇವಲ ವಾರ್ಡ್'ಬಾಯ್ಗಳು ಚಿಕಿತ್ಸೆ ನೀಡಿದರೇ ಹೊರತು ವೈದ್ಯರು ಚಿಕಿತ್ಸೆ ನೀಡಲಿಲ್ಲ, ಎಷ್ಟೆ ಗೋರಿದರು ಕಿಮ್ಸ್ ವೈದ್ಯರು ಮಾತ್ರ ಕ್ಯಾರೆ ಎನ್ನಲ್ಲಿಲ್ಲವೆಂದು ಪೋಷಕರು ಹೇಳಿದ್ದಾರೆ.
ಹುಬ್ಬಳ್ಳಿ (ಜ.21): ಹುಬ್ಬಳ್ಳಿ ಕಿಮ್ಸ್ ವೈದ್ಯರ ನಿರ್ಲಕ್ಷ್ಯಕ್ಕೆ 7 ತಿಂಗಳ ಮಗು ಬಲಿಯಾಗಿದೆ. ನಿನ್ನೆ ರಾತ್ರಿ ಅಪಘಾತದಲ್ಲಿ ಮಗುವಿನ ಬಲಗಾಲಿಗೆ ಪೆಟ್ಟಾಗಿದ್ದು, 11.30ಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು..
ಆದರೆ ಸುಮಾರು ಒಂದು ಗಂಟೆ ಕಿಮ್ಸ್ ಆಸ್ಪತ್ರೆಯಲ್ಲಿಟ್ಟುಕೊಂಡು ಚಿಕಿತ್ಸೆ ನೀಡದೆ ಧಾರವಾಡ ಎಸ್.ಡಿ.ಎಂ ಆಸ್ಪತ್ರೆಗೆ ಕರೆದೊಯ್ಯುವುವಂತೆ ವೈದ್ಯರು ಸೂಚಿಸಿದ್ದಾರೆ.
ಅದರಂತೆ ಎಸ್.ಡಿ.ಎಂಗೆ ಮಗುವನ್ನು ದಾಖಸಿದರೆ ಇಲ್ಲಿ ಖರ್ಚು ಹೆಚ್ಚಾಗುತ್ತೆ ಅದಕ್ಕೆ ಕಿಮ್ಸ್'ಗೆ ಕರೆದುಕೊಂಡು ಹೋಗಿ ಅಲ್ಲಿಯೂ ಇದೇ ರೀತಿಯ ಚಿಕಿತ್ಸೆ ಸೌಲಭ್ಯವಿದೆ ಎಂದು SDM ವೈದ್ಯರು ತಿಳಿಸಿದ್ದಾರೆ.
ಮಗುವಿಗೆ ಕೇವಲ ವಾರ್ಡ್'ಬಾಯ್ಗಳು ಚಿಕಿತ್ಸೆ ನೀಡಿದರೇ ಹೊರತು ವೈದ್ಯರು ಚಿಕಿತ್ಸೆ ನೀಡಲಿಲ್ಲ, ಎಷ್ಟೆ ಗೋರಿದರು ಕಿಮ್ಸ್ ವೈದ್ಯರು ಮಾತ್ರ ಕ್ಯಾರೆ ಎನ್ನಲ್ಲಿಲ್ಲವೆಂದು ಪೋಷಕರು ಹೇಳಿದ್ದಾರೆ.
ತೀವ್ರ ರಕ್ತಸ್ರಾವದಿಂದ ಬೆಳಗಿನ ಜಾವ ಮಗು ಮೃತ ಪಟ್ಟಿದೆ. ಮಗು ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ನಿರ್ಲಕ್ಷ ತೋರಿದ ವೈದ್ಯರ ವಿರುದ್ಧ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ.