ಖಾಸಗಿ ವೈದ್ಯನ ಯಡವಟ್ಟಿನಿಂದಾಗಿ ಶಾಲಾ ಬಾಲಕಿಯೊಬ್ಬಳು ಬಲಿಯಾಗಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳ (ಜ.21): ಖಾಸಗಿ ವೈದ್ಯನ ಯಡವಟ್ಟಿನಿಂದಾಗಿ ಶಾಲಾ ಬಾಲಕಿಯೊಬ್ಬಳು ಬಲಿಯಾಗಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿನ ಗಂಗಾವತಿ ನಗರದ ಗಾಯಿತ್ರಿ ಜ್ವರದಿಂದ ಬಳಲುತ್ತಿದ್ದ ಕಾರಣ ಡಾ, ಸಂತೋಷ್ ಕುಮಾರ್ ಎಂಬ ವೈದ್ಯನ ಬಳಿ ಹೋಗಿದ್ದಾರೆ. ಆದರೆ ವೈದ್ಯ ಕೊಟ್ಟ ಮೆಡಿಸಿನ್ ರಿಯಾಕ್ಷನ್ ಆಗಿದೆ. ಬಾಲಕಿಗೆ ಚುಚ್ಚುಮದ್ದು ಕೊಟ್ಟ ಭಾಗ ನೀಲಿ ಬಣ್ಣಕ್ಕೆ ತಿರುಗಿ ಬಾವು ಕಾಣಿಸಿಕೊಂಡಿದೆ. ನಂತರ ಬಾಲಕಿ ಮೃತಪಟ್ಟಿದ್ದಾಳೆ. ವೈದ್ಯನ ನಿರ್ಲಕ್ಷ್ಯ ದಿಂದ ಬಾಲಕಿ ಮೃತಪಟ್ಟಿದ್ದಾಳೆ ಎಂದು ಪೋಷಕರು ಆರೋಪಿಸುತ್ತಿದ್ದು, ಗಂಗಾವತಿ ನಗರ ಠಾಣಾಯಲ್ಲಿ ಪ್ರಕರಣ ದಾಖಲಿಸಿದ್ದಾರೆ.