ಅತ್ಯಾಚಾರದಿಂದ ಹುಟ್ಟಿದ ಮಗು ಪರಿಹಾರಕ್ಕೆ ಅರ್ಹವಾಗಿದ್ದು ತಾಯಿ ಹಾಗೂ ಮಗು ಇಬ್ಬರಿಗೂ ಪರಿಹಾರವನ್ನು ನೀಡಬೇಕು ಎಂದು ದೆಹಲಿ ನ್ಯಾಯಾಲಯ ಆದೇಶಿಸಿದೆ.

ನವದೆಹಲಿ (ಡಿ.13): ಅತ್ಯಾಚಾರದಿಂದ ಹುಟ್ಟಿದ ಮಗು ಪರಿಹಾರಕ್ಕೆ ಅರ್ಹವಾಗಿದ್ದು ತಾಯಿ ಹಾಗೂ ಮಗು ಇಬ್ಬರಿಗೂ ಪರಿಹಾರವನ್ನು ನೀಡಬೇಕು ಎಂದು ದೆಹಲಿ ನ್ಯಾಯಾಲಯ ಆದೇಶಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಂದೆಯೊಬ್ಬ ಅಪ್ರಾಪ್ತ ತನ್ನ ಮಲಮಗಳ ಮೇಲೆ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ.

ಅತ್ಯಾಚಾರಕ್ಕೆ ಒಳಪಟ್ಟ ಅಪ್ರಾಪ್ತೆ ಅಥವಾ ವಯಸ್ಕ ಹೆಣ್ಣುಮಗಳಿಗೆ ಮಗು ಹುಟ್ಟಿದರೆ ಆ ಮಗು ಪರಿಹಾರಕ್ಕೆ ಅರ್ಹವಾಗಿದ್ದು, ಮಗು ಹಾಗೂ ತಾಯಿ ಇಬ್ಬರಿಗೂ ಪರಿಹಾರವನ್ನು ನೀಡಬೇಕು ಎಂದು ನ್ಯಾ.ಗೀತಾ ಮಿತ್ತಲ್ ಮತ್ತು ಆರ್,ಕೆ ಗೌಬಾ ಪೀಠವು

ಸ್ಪಷ್ಟವಾಗಿ ಹೇಳಿದೆ.