ಬೆಂಗಳೂರು (ಡಿ. 24): ಕೋಟಿ ಭ್ರಷ್ಟಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಚಿಕ್ಕರಾಯಪ್ಪ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಡಿ 31. ಕ್ಕೆ ಮುಂದೂಡಲಾಗಿದೆ. 

ಚಿಕ್ಕರಾಯಪ್ಪ ಹುಡುಕಾಟಕ್ಕಾಗಿ ಎಸಿಬಿ ಲುಕೌಟ್ ನೋಟೀಸ್ ಹೊರಡಿಸಿತ್ತು. ಎಸಿಬಿ ಪೊಲೀಸರು ಬಂಧಿಸದಂತೆ ನಿರೀಕ್ಷಣಾ ಜಾಮೀನಿಗಾಗಿ ಚಿಕ್ಕರಾಯಪ್ಪ ಅರ್ಜಿ ಸಲ್ಲಿಸಿದ್ದಾರೆ. 

ಒಂದೇ ಒಂದು ವಿಚಾರಣೆಗೂ ಹಾಜರಾಗದೇ ಪರಾರಿಯಾಗಿದ್ದಾರೆ. ಚಿಕ್ಕರಾಯಪ್ಪಗಾಗಿ ಜಾರಿ ನಿರ್ದೇಶನಾಲಯ ಕೂಡ ಹುಡುಕಾಟ ಮುಂದುವರೆಸಿದೆ. 

ಚಿಕ್ಕರಾಯಪ್ಪ ಪರ ವಕೀಲರ ಗೈರು ಹಿನ್ನೆಲೆಯಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ಅರ್ಜಿ ವಿಚಾರಣೆ ಮುಂದೂಡಿದೆ.