ಚಿಕ್ಕಮಗಳೂರು ಜಿಲ್ಲೆ, ಕಾಫಿನಾಡೆಂದೇ ಪ್ರಖ್ಯಾತಿ ಪಡೆದಿದೆ. ಇದೀಗ ಈ ಭಾಗದ ಕಾಫಿ ಬೆಳೆಗಾರರು ಬಯಲುಭಾಗದಲ್ಲಿ ಬೆಳೆಯುವ ಹೊಸ ಕಾಫಿ ಬೆಳೆ ಪದ್ಧತಿ ಅನುಸರಿಸುತ್ತಿದ್ದಾರೆ. ಈ ಭಾಗದಲ್ಲಿ ಅರೇಬಿಕಾ, ರೋಬಸ್ಟಾ ಕಾಫಿ ಬೆಳೆಯನ್ನ ಹೇರಳವಾಗಿ ಬೆಳೆಯುತ್ತಿದ್ದರು. ಆದರೆ ಕಾಲಕಾಲಕ್ಕೆ ಮಳೆಯಾಗದಿರುವುದರಿಂದ ಇಳುವರಿ ಪ್ರಮಾಣದಲ್ಲಿ ಗಣನೀಯ ಕಡಿಮೆಯಾಗಿದೆ. ಹೀಗಾಗಿ ಬೆಳೆಗಾರರು ಕೃಷಿ ಪದ್ಧತಿಯನ್ನೇ ಬದಲಾಯಿಸಿಕೊಳ್ಳುತ್ತಿದ್ದಾರೆ. ಬಯಲುಭಾಗದಲ್ಲಿ ಬೆಳೆಯುವ ಬ್ರೆಜಿಲ್ ದೇಶದ ಕಾಫಿ ಬೆಳೆ ಪದ್ಧತಿ ಅನುಸಲು ಮುಂದಾಗಿದ್ದಾರೆ. ಸಾಮಾನ್ಯ ಕಾಫಿ ತೋಟಗಳಲ್ಲಿ 10 ಗಿಡಗಳಲ್ಲಿ ತೆಗೆಯುವ ಫಸಲು. ಕೇವಲ 1 ಗಿಡದಲ್ಲೇ ಲಭಿಸಲಿದೆ. 25 ವರ್ಷಗಳ ಕಾಲ ನಿರಂತರವಾಗಿ ಉತ್ತಮ ಫಸಲು ನೀಡಲಿದೆ. ಹೀಗಾಗಿ ಮಲೆನಾಡಿನಲ್ಲಿ ಬೆಳೆಗಾರರು ಬ್ರೆಜಿಲ್ ಕಾಫಿ ಕೃಷಿ ಪದ್ಧತಿ ಅನುಸರಿಸುತ್ತಿದ್ದಾರೆ. ಆದರೆ, ಬ್ರೆಜಿಲ್ ದೇಶದ ಕಾಫಿ ಬೆಳೆ ಪದ್ಧತಿಯಿಂದ ಮಲೆನಾಡಿನ ಪರಿಸರ ಮೇಲೆ ಬಹುದೊಡ್ಡ ಹೊಡೆತ ಬೀಳಲಿದೆ ಎಂದು ಸ್ಥಳೀಯರು ಆತಂಕವಾಗಿದೆ. ಭವಿಷ್ಯದಲ್ಲಿ ಎದುರಾಗಲಿರುವ ಗಂಭೀರ ಸಮಸ್ಯೆ ಈಗ ಅರಿವಿಗೆ ಬರುತ್ತಿಲ್ಲ. ಕಾಫಿ ಸಂಶೋಧನಾ ಕೇಂದ್ರದವರು ಈ ಕುರಿತು ಬೆಳೆಗಾರರಲ್ಲಿ ಜಾಗೃತಿ ಮೂಡಿಸಬೇಕಾಗಿದೆ.
ಚಿಕ್ಕಮಗಳೂರು(ಅ.09): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸದ್ದಿಲ್ಲದೆ ಹೊಸ ಕಾಫಿ ಬೆಳೆ ಪದ್ಧತಿ ಕಾಲಿಡುತ್ತಿದೆ. ನಿರಂತರವಾದ ಹವಾಮಾನ ವೈಪರೀತ್ಯಕ್ಕೆ ಕಂಗೆಟ್ಟು ಹೋಗಿದ್ದ ಬೆಳೆಗಾರರು ಉತ್ತಮ ಇಳುವರಿ ದೊರೆಯುವ ನೂತನ ಬೆಳೆ ಪದ್ಧತಿಯತ್ತ ಮುಖಮಾಡಿದ್ದಾರೆ. ಹಾಗಾದರೆ ಆ ಹೊಸ ಕಾಫಿ ಪದ್ಧತಿ ಯಾವುದು? ಅದರ ಅನುಕೂಲ ಅನಾನುಕೂಲಗಳೇ? ಇಲ್ಲಿದೆ ವಿವರ.
ಚಿಕ್ಕಮಗಳೂರು ಜಿಲ್ಲೆ, ಕಾಫಿನಾಡೆಂದೇ ಪ್ರಖ್ಯಾತಿ ಪಡೆದಿದೆ. ಇದೀಗ ಈ ಭಾಗದ ಕಾಫಿ ಬೆಳೆಗಾರರು ಬಯಲುಭಾಗದಲ್ಲಿ ಬೆಳೆಯುವ ಹೊಸ ಕಾಫಿ ಬೆಳೆ ಪದ್ಧತಿ ಅನುಸರಿಸುತ್ತಿದ್ದಾರೆ. ಈ ಭಾಗದಲ್ಲಿ ಅರೇಬಿಕಾ, ರೋಬಸ್ಟಾ ಕಾಫಿ ಬೆಳೆಯನ್ನ ಹೇರಳವಾಗಿ ಬೆಳೆಯುತ್ತಿದ್ದರು. ಆದರೆ ಕಾಲಕಾಲಕ್ಕೆ ಮಳೆಯಾಗದಿರುವುದರಿಂದ ಇಳುವರಿ ಪ್ರಮಾಣದಲ್ಲಿ ಗಣನೀಯ ಕಡಿಮೆಯಾಗಿದೆ. ಹೀಗಾಗಿ ಬೆಳೆಗಾರರು ಕೃಷಿ ಪದ್ಧತಿಯನ್ನೇ ಬದಲಾಯಿಸಿಕೊಳ್ಳುತ್ತಿದ್ದಾರೆ. ಬಯಲುಭಾಗದಲ್ಲಿ ಬೆಳೆಯುವ ಬ್ರೆಜಿಲ್ ದೇಶದ ಕಾಫಿ ಬೆಳೆ ಪದ್ಧತಿ ಅನುಸಲು ಮುಂದಾಗಿದ್ದಾರೆ. ಸಾಮಾನ್ಯ ಕಾಫಿ ತೋಟಗಳಲ್ಲಿ 10 ಗಿಡಗಳಲ್ಲಿ ತೆಗೆಯುವ ಫಸಲು. ಕೇವಲ 1 ಗಿಡದಲ್ಲೇ ಲಭಿಸಲಿದೆ. 25 ವರ್ಷಗಳ ಕಾಲ ನಿರಂತರವಾಗಿ ಉತ್ತಮ ಫಸಲು ನೀಡಲಿದೆ. ಹೀಗಾಗಿ ಮಲೆನಾಡಿನಲ್ಲಿ ಬೆಳೆಗಾರರು ಬ್ರೆಜಿಲ್ ಕಾಫಿ ಕೃಷಿ ಪದ್ಧತಿ ಅನುಸರಿಸುತ್ತಿದ್ದಾರೆ.
ಆದರೆ, ಬ್ರೆಜಿಲ್ ದೇಶದ ಕಾಫಿ ಬೆಳೆ ಪದ್ಧತಿಯಿಂದ ಮಲೆನಾಡಿನ ಪರಿಸರ ಮೇಲೆ ಬಹುದೊಡ್ಡ ಹೊಡೆತ ಬೀಳಲಿದೆ ಎಂದು ಸ್ಥಳೀಯರು ಆತಂಕವಾಗಿದೆ. ಭವಿಷ್ಯದಲ್ಲಿ ಎದುರಾಗಲಿರುವ ಗಂಭೀರ ಸಮಸ್ಯೆ ಈಗ ಅರಿವಿಗೆ ಬರುತ್ತಿಲ್ಲ. ಕಾಫಿ ಸಂಶೋಧನಾ ಕೇಂದ್ರದವರು ಈ ಕುರಿತು ಬೆಳೆಗಾರರಲ್ಲಿ ಜಾಗೃತಿ ಮೂಡಿಸಬೇಕಾಗಿದೆ.
