ಕೋಳಿ ತಿನ್ನುವ ಮುನ್ನ ಎಚ್ಚರ : ಅದರಲ್ಲಿದೆ ಮೋಸ್ಟ್ ಡೇಂಜರಸ್ ವಿಷ

Chicken Is Dangerous For Health
Highlights

ಚಿಕನ್ ಬಿರಿಯಾನಿ, ಚಿಕನ್ ಕಬಾಬ್ ಸೇರಿದಂತೆ ಕೋಳಿ ಮಾಂಸದಿಂದ ತಯಾರಿಸಿದ ಔತಣ ಸೇವಿಸುವವರೇ ಹುಷಾರ್. ಬಾಯಲ್ಲಿ ನೀರೂರಿಸುವ ಮಾಂಸಾಹಾರಿ ಔತಣಕ್ಕಾಗಿ ನೀವು ಬಳಸುವ ಕೋಳಿ ಬಲು ಡೇಂಜರ್. ಹೀಗೆಂದು ಸಂಶೋಧನಾ ವರದಿಯೊಂದು ತಿಳಿಸಿದೆ.

ನವದೆಹಲಿ: ಚಿಕನ್ ಬಿರಿಯಾನಿ, ಚಿಕನ್ ಕಬಾಬ್ ಸೇರಿದಂತೆ ಕೋಳಿ ಮಾಂಸದಿಂದ ತಯಾರಿಸಿದ ಔತಣ ಸೇವಿಸುವವರೇ ಹುಷಾರ್. ಬಾಯಲ್ಲಿ ನೀರೂರಿಸುವ ಮಾಂಸಾಹಾರಿ ಔತಣಕ್ಕಾಗಿ ನೀವು ಬಳಸುವ ಕೋಳಿ ಬಲು ಡೇಂಜರ್. ಹೀಗೆಂದು ಸಂಶೋಧನಾ ವರದಿಯೊಂದು ತಿಳಿಸಿದೆ.

ಕೋಳಿಗಳಿಗೆ ಚಿಕಿತ್ಸೆ ನೀಡಲು ಅಥವಾ ಅವುಗಳು ವೇಗವಾಗಿ ಬೆಳೆಯಲಿ ಎಂದು ಅವುಗಳಿಗೆ ನೀಡಲಾಗುವ ಕಾಲಿಸ್ಟಿನ್ ಎಂಬ ಆ್ಯಂಟಿಬಯಾಟಿಕ್ಸ್ ಔಷಧವು, ಕೋಳಿ ಸೇವಿಸುವವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವರದಿ ಎಚ್ಚರಿಸಿದೆ. ಹೀಗಾಗಿ ಫಾರಂಗಳಿಂದ ಕೋಳಿ ಖರೀದಿಸುವ ಮುನ್ನ ಎಚ್ಚರ ವಹಿಸುವುದು ಒಳಿತು.

ಯಾವುದೀ ವರದಿ?: ‘ದ ಬ್ಯೂರೋ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸಂ’ ಎಂಬ ಸ್ವತಂತ್ರ ಸಂಸ್ಥೆಯೊಂದು ಭಾರತದಲ್ಲಿನ ಕೋಳಿ ಉದ್ಯಮದ ಕುರಿತು ತನಿಖೆ ನಡೆಸಿ ವರದಿಯೊಂದನ್ನು ಸಿದ್ಧಪಡಿಸಿದೆ.

ವರದಿಯಲ್ಲೇನಿದೆ?: ಕೋಳಿಗಳಿಗೆ ಚಿಕಿತ್ಸೆ ನೀಡಲು ಅಥವಾ ಅವು ಬೇಗ ಬೇಗ ಬಲವಾಗಿ ಬೆಳೆದು ಹೆಚ್ಚಿನ ಲಾಭ ತಂದುಕೊಡಲಿ ಎನ್ನುವ ಕಾರಣಕ್ಕೆ ಅವುಗಳಿಗೆ ಕಾಲಿಸ್ಟಿನ್ ಎಂಬ ಆ್ಯಂಟಿಬಯಾಟಿಕ್ಸ್ ನೀಡಲಾಗುತ್ತದೆ.

ತೊಂದರೆ ಏನು?: ಕಾಲಿಸ್ಟಿನ್ ಎನ್ನುವುದು, ನ್ಯುಮೋನಿಯಾ ಮತ್ತು ಇತರೆ ಕೆಲವು ಗಂಭೀರ ಸೋಂಕು ರೋಗಗಳಿಗೆ ಚಿಕಿತ್ಸೆ ನೀಡಲು ಬಳಸುವ ಔಷಧ. ಇನ್ಯಾವುದೇ ಔಷಧದಿಂದ ರೋಗ ಗುಣವಾಗದು ಎಂದು ಖಚಿತವಾದ ಮೇಲೆ ಅಂತಿಮವಾಗಿ ನೀಡುವ ಔಷಧವಿದು. ರೋಗ ಬಂದಾಗ ಮಾತ್ರ ಇದನ್ನು ಬಳಸಬೇಕು. ಆದರೆ ಇದನ್ನು ಕೋಳಿಗಳ ದೇಹವೃದ್ಧಿಗೆಂದು ಬಳಸಲಾಗುತ್ತಿದೆ. ಹೀಗೆ ಕೋಳಿಗಳಿಗೆ ನೀಡಿದ ಔಷಧ, ಅವುಗಳನ್ನು ಸೇವಿಸಿದ ಮನುಷ್ಯರ ದೇಹ ಸೇರಿದರೆ ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ.

loader