'ನಾನು ಯಾರ ಮಗ ಗೊತ್ತಾ ಎಂದು ಪೊಲೀಸರ ಲಾಠಿ ಕಸಿದುಕೊಂಡು ಅವರಿಗೆ ಥಳಿಸಿದ್ದಾನೆ.

ಬೆಂಗಳೂರು(ಸೆ.17): ಕುಡಿದ ಮತ್ತಿನಲ್ಲಿ ದಲಿತ ಸಂಘಟನೆ ಮುಖಂಡ ಚಿ.ನಾ.ರಾಮು ಪುತ್ರ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಮಲ್ಲೇಶ್ವರದ ಬಾರ್ ಒಂದರಲ್ಲಿ ಚಿ.ನಾ. ರಾಮು ಅವರ ಪುತ್ರ ಕಾರ್ಲ್ ಮಾರ್ಕ್ಸ್ ಬಾರ್ ಸಿಬ್ಬಂದಿ ಜೊತೆ ಜಗಳ ತೆಗೆದಿದ್ದಾನೆ. ಜಗಳ ಬಿಡಿಸಲು ಹೋದ ಪೇದೆಗಳಾದ ಉಮೇಶ್ ಹಾಗೂ ರುದ್ರೇಶ್ ಅವರಿಗೆ 'ನಾನು ಯಾರ ಮಗ ಗೊತ್ತಾ ಎಂದು ಪೊಲೀಸರ ಲಾಠಿ ಕಸಿದುಕೊಂಡು ಅವರಿಗೆ ಥಳಿಸಿದ್ದಾನೆ. ಹಲ್ಲೆಗೊಳಗಾದ ಪೇದೆ ಉಮೇಶ್ ಅವರನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಲ್ ಮಾಕ್ಸ್ , ಆದರ್ಶ್​, ಶ್ರೇಯಸ್ , ಕೇಶವ ಅವರನ್ನು ಬಂಧಿಸಲಾಗಿದೆ.