ಮಹಿಳೆಯೊಬ್ಬರು ತಮ್ಮ ನಾಲಿಗೆಯನ್ನೇ ಕತ್ತರಿಸಿ ಶಿವನಿಗೆ ಅರ್ಪಿಸಿದ ಆಘಾತಕಾರಿ ಘಟನೆ ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.

ಕೊರ್ಬಾ: ಮಹಿಳೆಯೊಬ್ಬರು ತಮ್ಮ ನಾಲಿಗೆಯನ್ನೇ ಕತ್ತರಿಸಿ ಶಿವನಿಗೆ ಅರ್ಪಿಸಿದ ಆಘಾತಕಾರಿ ಘಟನೆ ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.

ಸೀಮಾಭಾಯಿ(28) ಎಂಬುವವರು ಶಿವರಾತ್ರಿ ಪ್ರಯುಕ್ತ ಬೆಳಿಗ್ಗೆ ಹತ್ತಿರದ ಶಿವ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಮುಗಿದ ಬಳಿಕ ಚಾಕುವಿನಿಂದ ತಮ್ಮ ನಾಲಿಗೆ ತುಂಡರಿಸಿಕೊಂಡಿದ್ದಾರೆ.

ಅಲ್ಲಿದ್ದ ಗ್ರಾಮಸ್ಥರು ತಕ್ಷಣವೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಮಹಿಳೆಯ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಘಟನೆಯ ಹಿಂದಿನ ನಿರ್ದಿಷ್ಟಕಾರಣ ತಿಳಿದುಬಂದಿಲ್ಲ.