ಹಸುಗಳ ಸಾವಿನ ಕುರಿತಂತೆ ಕಾರಣ ತಿಳಿದುಬಂದಿಲ್ಲ. ಹಸುಗಳ ರಕ್ತದ ಮಾದರಿಗಳನ್ನು ಲ್ಯಾಬೊರೇಟರಿಗಳಿಗೆ ಕಳಿಸಲಾಗಿದೆ. ವರದಿಗಳಿಗಾಗಿ ಎದುರು ನೋಡುತ್ತಿದ್ದೇವೆ ಎಂದು ವೈದ್ಯಕೀಯ ಸಹಾಯಕ ಆಯುಕ್ತ ಸಂಜಯ್ ಅಗರ್'ವಾಲ್ ಹೇಳಿದ್ದಾರೆ.
ಛತ್ತೀಸ್'ಘಡ್(ಆ.19): ಬಿಜೆಪಿ ಸ್ಥಳೀಯ ಮುಖಂಡರೊಬ್ಬರು ನಿರ್ವಹಿಸುತ್ತಿರುವ ಸರ್ಕಾರಿ ಅನುದಾನಿತ ಗೋಶಾಲೆಯಲ್ಲಿ ಕಳೆದ ಮೂರು ದಿನಗಳಲ್ಲಿ 27 ಹಸುಗಳು ದುರಂತ ಸಾವಿಗೀಡಾಗಿರುವ ಘಟನೆ ಛತ್ತೀಸ್'ಗಢದಲ್ಲಿ ನಡೆದಿದೆ.
ಈ ಬಗ್ಗೆ ಬಿಜೆಪಿ ಮುಖಂಡ ಹರೀಶ್ ವರ್ಮಾ ವಿರುದ್ಧ ‘ಛತ್ತೀಸ್'ಗಢ ಗೋವು ಸೇವಾ ಆಯೋಗ’ ಪೊಲೀಸರಿಗೆ
ಶುಕ್ರವಾರ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಆ.15ರಂದು ಗೋಶಾಲೆಯ ತಡೆಗೋಡೆ ಕುಸಿದು ಬಿದ್ದು, ಹಸುಗಳು ಮೃತಪಟ್ಟಿವೆ ಎಂದು ಜಮುಲ್ ಮುನಿಸಿಪಾಲಿಟಿಯಲ್ಲಿ ಉಪಾಧ್ಯಕ್ಷರಾದ ವರ್ಮಾ ಹೇಳಿದ್ದಾರೆ.
ಹಸುಗಳ ಸಾವಿನ ಕುರಿತಂತೆ ಕಾರಣ ತಿಳಿದುಬಂದಿಲ್ಲ. ಹಸುಗಳ ರಕ್ತದ ಮಾದರಿಗಳನ್ನು ಲ್ಯಾಬೊರೇಟರಿಗಳಿಗೆ ಕಳಿಸಲಾಗಿದೆ. ವರದಿಗಳಿಗಾಗಿ ಎದುರು ನೋಡುತ್ತಿದ್ದೇವೆ ಎಂದು ವೈದ್ಯಕೀಯ ಸಹಾಯಕ ಆಯುಕ್ತ ಸಂಜಯ್ ಅಗರ್'ವಾಲ್ ಹೇಳಿದ್ದಾರೆ.