ನಗರಕ್ಕೆ ನೀರು ಪೂರೈಸುವ ಮೂಲಗಳೆಲ್ಲವೂ ಬತ್ತಿ ಹೋದ ಹಿನ್ನೆಲೆ| ಚಂದ್ರನಲ್ಲಿ ನೀರು ಸಿಕ್ಕರೆ ತಿಳಿಸಿ: ಇಸ್ರೋಗೆ ಚೆನ್ನೈ ಜಲಮಂಡಳಿ ಮನವಿ!| 

ಚೆನ್ನೈ[ಜು.24]: ಪಕ್ಕದಲ್ಲೇ ಸಮುದ್ರವಿದ್ದರೂ ನೀರಿನ ಬರ ನೀಗಿಸಿಕೊಳ್ಳಲಾಗದ ಚೆನ್ನೈ ಮಹಾನಗರ ಜಲಮಂಡಳಿ ಇದೀಗ, ಭೂಮಿ ಆಚೆಯ ಪರಿಹಾರ ಕಂಡುಕೊಳ್ಳುವತ್ತ ದೃಷ್ಟಿಹರಿಸಿದೆ! ನಿಜ. ನಗರಕ್ಕೆ ನೀರು ಪೂರೈಸುವ ಮೂಲಗಳೆಲ್ಲವೂ ಬತ್ತಿ ಹೋಗಿ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಜಲಮಂಡಳಿ ಇದೀಗ ನೀರಿಗಾಗಿ ಇಸ್ರೋದ ಮೊರೆ ಹೋಗಿದೆ.

Scroll to load tweet…

ಸೋಮವಾರವಷ್ಟೇ ಚಂದ್ರಯಾನ 2 ನೌಕೆಯ ಯಶಸ್ವಿ ಉಡ್ಡಯನದ ಬಗ್ಗೆ ಇಸ್ರೋಗೆ ಅಭಿನಂದನೆ ಸಲ್ಲಿಸಿರುವ ಜಲಮಂಡಳಿ, ‘ನಾವು ನಗರಕ್ಕೆ ನೀರಿನ ಮೂಲವನ್ನು ವೃದ್ಧಿಸುವ ಯತ್ನದಲ್ಲಿದ್ದೇವೆ. ಒಂದು ವೇಳೆ ಚಂದ್ರನ ಮೇಲೆ ನೀರು ಕಂಡುಬಂದರೆ, ನೀವು ಮೊದಲು ಯಾರನ್ನು ಸಂಪರ್ಕಿಸಬೇಕು ಗೊತ್ತಲ್ಲವೇ? ಎಂದು ಟ್ವೀಟ್‌ ಮಾಡಿದೆ.

Scroll to load tweet…
Scroll to load tweet…
Scroll to load tweet…
Scroll to load tweet…

ಈ ಟ್ವೀಟ್‌ ಭಾರೀ ಸುದ್ದಿ ಮಾಡುತ್ತಲೇ ಈ ಬಗ್ಗೆ ಪ್ರತಿಕ್ರಿಯಿಸಿದ ಜಲಮಂಡಳಿ ಟ್ವೀಟರ್‌ ನಿರ್ವಾಹಕರು, ನಾವು ಜನರೊಂದಿಗೆ ವಿನೂತನ ರೀತಿಯಲ್ಲಿ ಸಂಪರ್ಕ ಹೊಂದಲು ಬಯಸಿದ್ದೇವೆ. ಸಾಂಪ್ರದಾಯಿಕ ಉತ್ತರಗಳು ಮತ್ತು ಪ್ರತ್ರಿಕ್ರಿಯೆಗಳ ಹೊರತಾದ ಯಾವುದೇ ಸಂವಾದ ಹೆಚ್ಚು ಫಲಪ್ರದವಾಗುವ ಕಾರಣ ಇಂಥ ಟ್ವೀಟ್‌ ಮಾಡಲಾಗಿದೆ ಎಂದು ಹೇಳಿದೆ.