ಪಾಕಿಸ್ತಾನ ಮಾತ್ರ ಬದಲಾದ ಹಾಗೇ ಕಾಣಿಸುತ್ತಿಲ್ಲ. ದೇಶದ ತುಂಬ ಉಗ್ರ ಸಂಘಟನೆಗಳನ್ನ ಸಾಕಿರುವ ನರಿ ಬುದ್ಧಿಯ ಪಾಕ್ ಭಾರತ ಮೇಲೆ ದಾಳಿಗೆ ಒಂದಲ್ಲ ಒಂದು ರೀತಿ ಹೊಂಚು ಹಾಕುತ್ತಲೆ ಇದೆ. ಆದರೆ, ಈ ಬಾರಿ ಪಾಕ್ ಉಗ್ರ ಸಂಘಟನೆ ಮಾಡಿರುವ ಕುತಂತ್ರ ಭಾರತವನ್ನೇ ಬೆಚ್ಚಿ ಬೀಳಿಸುವಂತಹದ್ದು , ಏನದು ಯಾವ ಪ್ಲಾನ್? ಇಲ್ಲಿದೆ ವರದಿ

ನವದೆಹಲಿ(ಜು.13): ಪಾಕಿಸ್ತಾನ ಮಾತ್ರ ಬದಲಾದ ಹಾಗೇ ಕಾಣಿಸುತ್ತಿಲ್ಲ. ದೇಶದ ತುಂಬ ಉಗ್ರ ಸಂಘಟನೆಗಳನ್ನ ಸಾಕಿರುವ ನರಿ ಬುದ್ಧಿಯ ಪಾಕ್ ಭಾರತ ಮೇಲೆ ದಾಳಿಗೆ ಒಂದಲ್ಲ ಒಂದು ರೀತಿ ಹೊಂಚು ಹಾಕುತ್ತಲೆ ಇದೆ. ಆದರೆ, ಈ ಬಾರಿ ಪಾಕ್ ಉಗ್ರ ಸಂಘಟನೆ ಮಾಡಿರುವ ಕುತಂತ್ರ ಭಾರತವನ್ನೇ ಬೆಚ್ಚಿ ಬೀಳಿಸುವಂತಹದ್ದು , ಏನದು ಯಾವ ಪ್ಲಾನ್? ಇಲ್ಲಿದೆ ವರದಿ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ಮೂರು ದಿನಗಳ ಹಿಂದೆಯಷ್ಟೇ ಪಾಕ್ ನ ಲಷ್ಕರ್ ಇ ತೊಯಿಬಾ ಉಗ್ರ ಸಂಘಟನೆ ಅಮರನಾಥ ಯಾತ್ರಿಗಳ ಮೇಲೆ ಅಟ್ಟಹಾಸ ಮೆರೆದು 7 ಮಂದಿ ಅಮಾಯಕರನ್ನು ಬಲಿ ಪಡೆದಿತ್ತು, ಈಗ ಮತ್ತೆ ಪಾಕ್'ನ ಹಿಜ್ಬುಲ್ ಉಗ್ರ ಸಂಘಟನೆ ಭಾರತದ ಮೇಲೆ ಕೆಮಿಕಲ್ ದಾಳಿ ಮಾಡಲು ಪ್ಲಾನ್ ಮಾಡಿದೆ..

ಪಾಕ್ ನ ಉಗ್ರ ಸಂಘಟೆನಗಳು ಕಾಲು ಕೆರೆದು ಭಾರತದ ಮೇಲೆ ದಾಳಿ ಮಾಡುತ್ತಲೇ ಇದೆ. ಈಗ ಮತ್ತೆ ಭಾರತದ ಮೇಲೆ ಕೆಮಿಕಲ್ ವಾರ್ ಗೆ ಹಿಜ್ಬುಲ್ ಉಗ್ರ ಸಂಘಟನೆ ಸಿದ್ಧಗೊಂಡಿರುವ ಸ್ಫೋಟಕ ಮಾಹಿತಿ ಗುಪ್ತಚರ ಇಲಾಖೆ ಬಿಡುಗಡೆ ಮಾಡಿರುವ ಆಡಿಯೋ ಟೇಪ್'ನಲ್ಲಿ ಬಹಿರಂಗಗೊಂಡಿದೆ. ಕಾಶ್ಮೀರದಲ್ಲಿ ಕೆಮಿಕಲ್ ಬಾಂಬ್ ಪ್ರಯೋಗಿಸಲು ಈ ಉಗ್ರ ಸಂಫಟನೆ ಹೊಂಚು ಹಾಕುತ್ತಿದೆ. ಈಗಾಗಲೇ ಕೆಮಿಕಲ್ ವೆಪನ್ಸ್ ಗಳು ಹಿಜ್ಬುಲ್ ಉಗ್ರ ಸಂಘಟನೆಯ ಉಗ್ರರ ಕೈ ಸೇರಿರುವ ಮಾಹಿತಿ ಸಿಕ್ಕಿದ್ದು. ಪಾಕಿಸ್ತಾನದ ನರಿ ಬುದ್ಧಿ ಈ ಆಡಿಯೋ ಟೇಪ್ ಮೂಲಕ ಮತ್ತೆ ಬಯಲಾಗಿದೆ. ಕೆಮಿಕಲ್ ಬಾಂಬ್ ಪ್ರಯೋಗದ ಪ್ಲಾನ್ ರೂಪಿಸಲು ಉಗ್ರರು, ಲಷ್ಕರ್ ಇ ತೊಯಿಬಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಹಿದ್ ಜೊತೆ ಮಾತನಾಡಿರುವ ಆಡಿಯೋ ಬಹಿರಂಗಗೊಂಡಿದೆ.

‘ಪೀರ್ ಸಾಹಿಬ್ (LET ಮುಖ್ಯಸ್ಥ ಹಫೀಜ್ ಸೈಯದ್) ನಮ್ಮ ಮುಂದಿನ ಕಾರ್ಯಕ್ರಮ ಈದ್ ಬಳಿಕ. ನಾವು ಈದ್ ಮುಗಿದ ಬಳಿಕ ನಮ್ಮ ಮುಂದಿನ ಕಾರ್ಯಕ್ರಮದ ಪ್ಲ್ಯಾನ್ ಮಾಡಿಕೊಂಡಿದ್ದೇವೆ. ಇನ್‌ಶಾಲ್ಲಾ, ನಾವು ಪಾಕಿಸ್ತಾನದಿಂದ ಸಾಕಷ್ಟು ಬೆಂಬಲ ಪಡೆದಿದ್ದೇವೆ. ಕೆಲವೇ ದಿನಗಳಲ್ಲಿ ಪಾಕಿಸ್ತಾನ, ಭಾರತ ವಿರೋಧಿ ನಿಲುವು ತಾಳುತ್ತಿದೆ. ಸದ್ಯಕ್ಕೆ ನಾವು ಭಾರತೀಯ ಸೇನೆ ಮೇಲೆ ಗ್ರೆನೇಡ್ ಬಳಸುತ್ತಿದ್ದೇವೆ. ಅದರಿಂದ ನಾವು 3ರಿಂದ 4 ಉಗ್ರರನ್ನು ಮಾತ್ರ ಸಾಯಿಸಬಹುದು. ಗಾಯಗೊಳಿಸಬಹುದು. ಆದರೆ ಈಗ ನಮ್ಮ ತಂತ್ರ ಬದಲಾಗಿದೆ. ನಾವು ನೇರವಾಗಿ ಕೆಮಿಕಲ್ ಶಸ್ತ್ರಾಸ್ತ್ರ ಬಳಸಲು ಸಿದ್ದಗೊಂಡಿದ್ದೇವೆ. ಒಂದೇ ಸಮಯದಲ್ಲಿ ಹಲವು ಸೈನಿಕರನ್ನು ಹೊಡೆದುರುಳಿಸಬಹುದು.

ಭಾರತ ಮೇಲೆ ನೇರವಾಗಿ ಯುದ್ಧಮಾಡಿ ಗೆಲ್ಲುವ ತಾಕತ್ತು ಇಲ್ಲದ ನರಿ ಬುದ್ಧಿಯ ಪಾಕ್, ಉಗ್ರ ಸಂಘಟನೆಗಳನ್ನು ಭಾರತ ಮೇಲೆ ದಾಳಿಗೆ ಛೂ ಬೀಡುತ್ತಲೇ ಇದೆ. ಭಾರತದ ಮೇಲೆ ಕೆಮಿಕಲ್ ವಾರ್ ಮಾಡುವ ಸುದ್ದಿ ಹರಿದಾಡುತ್ತಿದ್ದು, ಪಾಕ್'ನ ಈ ಆಗುಂತಕ ಪ್ಲಾನ್'ಗೆ ಭಾರತ ಸನ್ನದ್ದವಾಗಬೇಕಿದೆ. ಪಾಕ್'ನ ಈ ತಂತ್ರಕ್ಕೆ ತಿರುಗುಬಾಣ ನೀಡಲು ಸಿದ್ಧವಾಗಬೇಕಿದೆ