ಇದಕ್ಕೆ ಕೆಲವೇ ಗಂಟೆಗಳಲ್ಲಿ  ಟ್ವಿಟರ್'ನಲ್ಲಿ  ಧನ್ಯವಾದದೊಂದಿಗೆ ಪ್ರತಿಕ್ರಿಯೆ ನೀಡಿದ  ಪ್ರಧಾನಿ ನರೇಂದ್ರ ಮೋದಿ  ಉತ್ತರ ಪ್ರದೇಶದ ಗೆಲುವು  ಆರಂಭವಷ್ಟೆ , ಅಂತಿಮವಾಗಿ  ಒಂದು ದಿನ ಪ್ರಜಾಪ್ರಭುತ್ವಕ್ಕೆ  ಜಯವಾಗಲಿದೆ' ಎಂದು  ಟ್ವೀಟ್ ಮಾಡಿದ್ದರು.

ಟ್ವಿಟರ್'ನಲ್ಲಿ ಇಬ್ಬರು ದಿಗ್ಗಜರ ನಡುವೆ ಒಂದು ಸಣ್ಣ ಟ್ವಿಟರ್ ಚರ್ಚೆ ನಡೆದಿದೆ. ಒಬ್ಬರು ದೇಶದ ಪ್ರಧಾನಿ ನರೇಂದ್ರ ಮೋದಿ, ಮತ್ತೊಬ್ಬರು ಖ್ಯಾತ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ವೀಕ್ಷಕ ವಿವರಣೆಗಾರ ರವಿ ಶಾಸ್ತ್ರಿ.

ರವಿ ಶಾಸ್ತ್ರಿ ಮಾರ್ಚ್ 16 ರಂದು ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರಿಗೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 300 ಸ್ಥಾನದೊಂದಿಗೆ ಅಭೂತಪೂರ್ವ ಗೆಲುವು ಸಾಧಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದರು.

ಇದಕ್ಕೆ ಕೆಲವೇ ಗಂಟೆಗಳಲ್ಲಿ ಟ್ವಿಟರ್'ನಲ್ಲಿ ಧನ್ಯವಾದದೊಂದಿಗೆ ಪ್ರತಿಕ್ರಿಯೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ಗೆಲುವು ಆರಂಭವಷ್ಟೆ , ಅಂತಿಮವಾಗಿ ಒಂದು ದಿನ ಪ್ರಜಾಪ್ರಭುತ್ವಕ್ಕೆ ಜಯವಾಗಲಿದೆ' ಎಂದು ಟ್ವೀಟ್ ಮಾಡಿದ್ದರು.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಕೂಡ ರಿಪ್ಲೆ ಮಾಡಿ ಕಾರ್ಯಕರ್ತರು ಹಾಗೂ ಪ್ರಧಾನಿ ನರೇಂದ್ರ ಮೋದಿ ಈ ಗೆಲುವಿಗೆ ಕಾರಣಕರ್ತರು ಎಂದು ಟ್ವೀಟಿಸಿದ್ದರು.