ಮಾತನಾಡುವ ಗಿಳಿಯೊಂದು ಬಿಚ್ಚಿಟ್ಟ ರಹಸ್ಯದಿಂದಾಗಿ ಪತಿ ಮಹಾಶಯನೊಬ್ಬ ಜೈಲಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಗಿಳಿಮರಿಯು ಮನೆ ಮಾಲಿಕ ಮತ್ತು ಮನೆಕೆಲಸದಾಕೆಯ ನಡುವಿದ್ದ ಅನೈತಿಕ ಸಂಬಂಧದ ರಹಸ್ಯವನ್ನು ಪತ್ನಿ ಎದುರು ಬಾಯ್ಬಿಟ್ಟಿದ್ದೇ ಈ ಅವಾಂತರಕ್ಕೆ ಕಾರಣವಾಗಿದೆ.

ದುಬೈ(ಅ.30): ಮಾತನಾಡುವ ಗಿಳಿಯೊಂದು ಬಿಚ್ಚಿಟ್ಟ ರಹಸ್ಯದಿಂದಾಗಿ ಪತಿ ಮಹಾಶಯನೊಬ್ಬ ಜೈಲಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಗಿಳಿಮರಿಯು ಮನೆ ಮಾಲಿಕ ಮತ್ತು ಮನೆಕೆಲಸದಾಕೆಯ ನಡುವಿದ್ದ ಅನೈತಿಕ ಸಂಬಂಧದ ರಹಸ್ಯವನ್ನು ಪತ್ನಿ ಎದುರು ಬಾಯ್ಬಿಟ್ಟಿದ್ದೇ ಈ ಅವಾಂತರಕ್ಕೆ ಕಾರಣವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಅರಬ್ ಟೈಮ್ಸ್'ನಲ್ಲಿ 'ಮಾತನಾಡುವ ಗಿಳಿಮರಿ ಮಾಲಿಕನ ಪತ್ನಿ ಎದುರು ಮಾಲಿಕ ಹಾಗೂ ಮನೆಕೆಲಸದಾಕೆ ಮಾತನಾಡುತ್ತಿದ್ದ ಪದಗಳನ್ನು ಪುನರುಚ್ಛರಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಇದಾದ ಬಳಿಕ ಹತ್ತಿರದ ಪೊಲೀಸ್ ಠಾಣೆಗೆ ತೆರಳಿದ ಮಹಿಳೆ ತನ್ನ ಪತಿ ತನಗೆ ಮೋಸ ಮಾಡಿದ್ದಾನೆ. ಈ ವಿಚಾರವಾಗಿ ಈ ಮೊದಲೇ ತನಗೆ ಸಂಶಯವಿತ್ತು, ಇಂದು ಅದು ಸಾಬೀತಾಗಿದೆ' ಎಂದು ದೂರು ನೀಡಿದ್ದಾಳೆ.

ಈ ಕುರಿತಾಗಿ ಮಾತನಾಡಿದ ಪತ್ನಿ 'ನಾನು ನಿಗಧಿತ ಸಮಯಕ್ಕಿಂತ ಮೊದಲೇ ಕಚೇರಿಯಿಂದ ಮನೆಗೆ ಬಂದಿರುವುದನ್ನು ಕಂಡು ನನ್ನ ಪತಿ ಗಾಬರಿಗೊಂಡಿದ್ದ' ಎಂದಿದ್ದಾಳೆ.

ಇದೇ ವಿಚಾಋವಾಗಿ ಮಾತನಾಡಿದ ಪೊಲೀಸ್ ಅಧಿಕಾರಿ 'ಬಲವಾದ ಸಾಕ್ಷಿಗಳು ಇಲ್ಲದಿರುವುದರಿಂದ ಇದನ್ನು ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲ. ಗಿಳಿಮರಿಯ ಮಾತುಗಳಿಂದ ಅವರಿಬ್ಬರ ನಡುವಿರುವ ಸಂಬಂಧವನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಲೂ ಸಾಧ್ಯವಿಲ್ಲ. ಟಿವಿ ಇಲ್ಲವೇ ರೇಡಿಯೋದಲ್ಲಿ ಕೇಳಿದ ಮಾತುಗಳನ್ನೇ ಗಿಳಿ ಮರಿ ಪುನರುಚ್ಛರಿಸಿರುವ ಸಾಧ್ಯತೆಗಳಿವೆ ಹೀಗಾಗಿ ಮಹಿಳೆ ನೀಡಿರುವ ದೂರನ್ನು ನಾವು ಸ್ವೀಕರಿಸಿಲ್ಲ' ಎಂದಿದ್ದಾರೆ.