Asianet Suvarna News Asianet Suvarna News

ಚಳ್ಳಕೆರೆಯಲ್ಲಿ ಚಂದ್ರಯಾನ-2 ಪ್ರಯೋಗ

ಚಂದ್ರನ ಮೇಲ್ಮೈಯ ಮೇಲೆ ಇಳಿಯುವ ಭಾರತದ ಚಂದ್ರಯಾನ-2 ಮಿಶನ್ ಯಶಸ್ವಿಗೊಳಿಸುವುದಕ್ಕಾಗಿ, ಚಳ್ಳಕೆರೆಯಲ್ಲಿ ನಿರ್ಮಿಸಲಾಗಿರುವ ಕೃತಕ ಚಂದ್ರನ ಕುಳಿಯಲ್ಲಿ ಈ ಪ್ರಯೋಗ ನಡೆಯುತ್ತಿದೆ ಎಂದು ಇಸ್ರೊ ಅಧ್ಯಕ್ಷ ಎಎಸ್ ಕಿರಣ್ ಕುಮಾರ್ ಹೇಳಿದ್ದಾರೆ.

Chandrayaan 2 mission ISRO conducts tests for Moon landing

ಬೆಂಗಳೂರು(ನ.11): ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ಮಿಶನ್ ಯಶಸ್ವಿಗೆ ಇಸ್ರೊ ಈಗಾಗಲೇ ಪ್ರಯೋಗಾರ್ಥ ಪರೀಕ್ಷೆ ಕರ್ನಾಟಕದ ಚಳ್ಳಕೆರೆಯಲ್ಲಿ ಆರಂಭಿಸಿದೆ.

ಚಂದ್ರನ ಮೇಲ್ಮೈಯ ಮೇಲೆ ಇಳಿಯುವ ಭಾರತದ ಚಂದ್ರಯಾನ-2 ಮಿಶನ್ ಯಶಸ್ವಿಗೊಳಿಸುವುದಕ್ಕಾಗಿ, ಚಳ್ಳಕೆರೆಯಲ್ಲಿ ನಿರ್ಮಿಸಲಾಗಿರುವ ಕೃತಕ ಚಂದ್ರನ ಕುಳಿಯಲ್ಲಿ ಈ ಪ್ರಯೋಗ ನಡೆಯುತ್ತಿದೆ ಎಂದು ಇಸ್ರೊ ಅಧ್ಯಕ್ಷ ಎಎಸ್ ಕಿರಣ್ ಕುಮಾರ್ ಹೇಳಿದ್ದಾರೆ.

ಚಂದ್ರಯಾನ-2ರಲ್ಲಿ ಇಳಿಸಲಾಗುವ ಉಪಕರಣಗಳು, ಸೆನ್ಸಾರ್‌ಗಳನ್ನು ಚಂದ್ರನ ಮೇಲಿನ ಕುಳಿಗಳ ರೂಪದಲ್ಲಿ ರಚಿಸಲಾದ ಭೂ ಪ್ರದೇಶದಲ್ಲಿ ಪ್ರಯೋಗ ಮಾಡಲಾಗುತ್ತದೆ.

‘‘ಚಂದ್ರಯಾನ-2 ಮಿಶನ್‌ಗೆ ಸಂಬಂಧಿಸಿ ನಾವು ಕೆಲವು ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ. ಅದಕ್ಕಾಗಿ ಚಳ್ಳಕೆರೆಯಲ್ಲಿರುವ ನಮ್ಮ ಪ್ರದೇಶದಲ್ಲಿ ಕೆಲವು ಉಪಕರಣಗಳನ್ನು ವಿಮಾನದಲ್ಲಿ ಇಳಿಸಲಾಗುತ್ತದೆ’’ ಎಂದು ಕುಮಾರ್ ಹೇಳಿದ್ದಾರೆ.

Follow Us:
Download App:
  • android
  • ios