‘‘ಮಕ್ಕಳು ಕೆಲಸವನ್ನು ಇಷ್ಟಪಟ್ಟು ಮಾಡಬೇಕು ಮತ್ತು ಸಾಧನೆ ಪೂರ್ಣಗೊಳಿಸಲು ಕಷ್ಟಪಡಬೇಕು. ನಿಮ್ಮ ಸಣ್ಣ ಆವಿಷ್ಕಾರಗಳು ದೊಡ್ಡ ಮಟ್ಟದ ಸಂಶೋಧನೆಗೆ ಹಾದಿಮಾಡಿಕೊಡುತ್ತದೆ’’- ಚಂದ್ರಬಾಬು ನಾಯ್ಡು
ತಿರುಪತಿ(ಜ.05): ಆಂಧ್ರಪ್ರದೇಶ ರಾಜ್ಯದ ಯಾವುದೇ ಕ್ಷೇತ್ರದ ಸಾಧಕರು ನೊಬೆಲ್ ಪ್ರಶಸ್ತಿ ಪಡೆದರೆ ಅವರಿಗೆ ರಾಜ್ಯ ಸರ್ಕಾರದಿಂದ ₹100 ಕೋಟಿ ಬಹುಮಾನ ನೀಡುವುದಾಗಿ ಸಿಎಂ ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ.
ತಿರುಪತಿಯ ಪದ್ಮಾವತಿ ಮಹಿಳಾ ವಿಶ್ವವಿದ್ಯಾಲಯಲ್ಲಿ ನಡೆದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮ್ಮೇಳನದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
‘‘ಮಕ್ಕಳು ಕೆಲಸವನ್ನು ಇಷ್ಟಪಟ್ಟು ಮಾಡಬೇಕು ಮತ್ತು ಸಾಧನೆ ಪೂರ್ಣಗೊಳಿಸಲು ಕಷ್ಟಪಡಬೇಕು. ನಿಮ್ಮ ಸಣ್ಣ ಆವಿಷ್ಕಾರಗಳು ದೊಡ್ಡ ಮಟ್ಟದ ಸಂಶೋಧನೆಗೆ ಹಾದಿಮಾಡಿಕೊಡುತ್ತದೆ,’’ ಎಂದು ಬಾಬು ಸಲಹೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ 2015ರ ನೊಬೆಲ್ ಪುರಸ್ಕೃತ ಜಪಾನ್ ಭೌತಶಾಸ್ತ್ರ ಪ್ರೊ. ತಕಾಕಿ ಕಜಿತ ಅವರಿಗೆ ಸನ್ಮಾನ ಮಾಡಿದರು.
