ಬಿಗ್ ಬಾಸ್ ಹುಡುಗ ಮತ್ತೆ ಬ್ಯಾಕ್ ಟೂ ಪೆವಿಲಿಯನ್

Chandan Kumar Back To Small Screen
Highlights

  • ಬಿಗ್ ಬಾಸ್ ನಟ ಚಂದನ್ ಕುಮಾರ್ ಮತ್ತೆ ಕಿರುತೆರೆಗೆ ಪ್ರವೇಶ
  • ಹೊಸ ಕಾರ್ಯಕ್ರಮದ ಹೆಸರು ಸರ್ವಮಂಗಳ ಮಾಂಗಲ್ಯೇ 

ಬೆಂಗಳೂರು[ಜು.04]: ಕಿರುತೆರೆಯಲ್ಲಿ ಚಾಕ್ಲೆಟ್ ಹುಡುಗ ಎಂದೇ ಖ್ಯಾತಿ ಪಡೆದಿರುವ ಚಂದನ್ ಬಿಗ್ ಬಾಸ್ ಮೂಲಕ ಪ್ರೇಕ್ಷಕರಿಗೆ ಹೆಚ್ಚು ಹತ್ತಿರವಾದರು. ಲವ್ ಯು ಆಲಿಯಾ, ಅರ್ಜುನ್ ಸರ್ಜಾ ನಿರ್ಮಾಣದ ಪ್ರೇಮ ಬರಹ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.

ಉತ್ತಮ ಅಭಿರುಚಿಯಿದ್ದ ಈ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಿರಲಿಲ್ಲ. ಮತ್ತೆ ಬ್ಯಾಕ್ ಟೂ ಪೆವಿಲಿಯನ್ ಎಂಬಂತೆ ಕಿರುತೆರೆಗೆ ಮರಳಲಿದ್ದಾರೆ.

ಈ ಮೊದಲು ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಚಿರಪರಿಚಿತರಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು.  ಕನ್ನಡದ ಪ್ರಮುಖ ಖಾಸಗಿ ಮನರಂಜನಾ ವಾಹಿನಿಯು ಸರಣಿ ಕಾರ್ಯಕ್ರಮವನ್ನು ನಿರ್ಮಿಸಲಿದ್ದು ಪ್ರಮುಖ ಪಾತ್ರ ಚಂದನ್ ಅವರಿಗೆ ಮೀಸಲು ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಸರ್ವಮಂಗಳ ಮಾಂಗಲ್ಯೇ ಅಂತ ಹೆಸರಿಡಲಾಗಿಯಂತೆ. 

ಸರ್ವಮಂಗಳ ಮಾಂಗಲ್ಯೇ ಹಿಂದಿ ಕಾರ್ಯಕ್ರಮದ ಅವತರಣಿಕೆಯಾಗಿದ್ದು ಪ್ರೇಮಕಥೆಗಳನ್ನು ಒಳಗೊಂಡ ಸಂಚಿಕೆಗಳಾಗಿರುತ್ತದೆ. ಇದರಲ್ಲಿ ಒರಟು ಯುವಕನ ಪಾತ್ರವನ್ನು ಚಂದನ್ ನಿರ್ವಹಿಸಲಿದ್ದಾರೆ. ಕನ್ನಡದ ಹಲವು ಹಿರಿತೆರೆ ನಟರು ಸಿನಿಮಾಗಳ ಜೊತೆಯಲ್ಲೇ ಕಿರುತೆರೆಯಲ್ಲೂ  ಅಭಿನಯಿಸುವ ಮೂಲಕ ತಮ್ಮ ಛಾಪನ್ನು ಹೆಚ್ಚಿಸಿಕೊಂಡಿದ್ದಾರೆ.

 

loader