ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹಿರಿಯ ಸಾಹಿತಿ ಚಂಪಾ ಸ್ಪರ್ಧೆ..?

First Published 15, Jan 2018, 2:13 PM IST
Champa Contest In Election
Highlights

ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸೂಕ್ಷ್ಮವಾಗಿ ಹಿರಿಯ ಸಾಹಿತಿ ಚಂಪಾ ಇಂಗಿತ ವ್ಯಕ್ತಪಡಿಸಿದ್ದಾರೆ.

ಕೂಡಲಸಂಗಮ(ಜ.15): ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸೂಕ್ಷ್ಮವಾಗಿ ಹಿರಿಯ ಸಾಹಿತಿ ಚಂಪಾ ಇಂಗಿತ ವ್ಯಕ್ತಪಡಿಸಿದ್ದಾರೆ.

ಕೂಡಲ ಸಂಗಮದಲ್ಲಿ ಇಂದು ಉದಯವಾದ ಹೊಸ ಪಕ್ಷಕ್ಕೆ ಚಾಲನೆ ನೀಡಿದ  ಹಿರಿಯ ಸಾಹಿತಿ ಚಂದ್ರಶೇಖರ್ ಪಾಟೀಲ್  ವಿಚಾರ ಹೇಳಿದ್ದಾರೆ. ರಾಜಕೀಯ ನಿರ್ಧಾರ ಕೈಗೊಳ್ಳುವ ವಿಚಾರ ಮುಂದೆ ಬಂದೇ ಬರುತ್ತದೆ.

ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುತ್ತೇವೆ. ನಾನು ಚುನಾವಣೆ ಸ್ಪರ್ಧೆ ಮಾಡುವುದು ವೈಯಕ್ತಿಕ ವಿಚಾರವಲ್ಲ  ಪಕ್ಷ ನಿರ್ಧರಿಸಿದಂತೆ ನಿರ್ಧಾರ ಮಾಡುವುದಾಗಿ ಹೇಳಿದ್ದಾರೆ.

 ರಾಷ್ಟ್ರೀಯ ಪಕ್ಷಗಳ  ಜಟಾಪಟಿ ಮಧ್ಯೆ ನಮ್ಮ  ನೆಲ, ಜಲ, ಶಿಕ್ಷಣ ಬೇಕಾದರೆ ಆಂಧ್ರ, ತಮಿಳುನಾಡು ಮಾದರಿಯಂತೆ ಪ್ರಾದೇಶಿಕ ಪಕ್ಷ ಅನಿವಾರ್ಯ ಎಂದು ಹೇಳಿದ್ದಾರೆ.

ಮಹದಾಯಿ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವಂತಹ ಪಕ್ಷ. ಹೊಸ ಜನ ಸಾಮಾನ್ಯರ ಪಕ್ಷ ಬಂದಿರುವುದು ಸ್ವಾಗತಾರ್ಹ. ಬೇರೆ ಬೇರೆ ಪಕ್ಷದಿಂದ ಹತಾಶೆಗೊಂಡು ಬಂದವರ ಪಕ್ಷವಲ್ಲ. ರೈತರೆಲ್ಲರೂ ಈ ಹೊಸ ಪಕ್ಷದೊಂದಿಗೆ ಮುನ್ನಡೆಯುತ್ತಾರೆ ಎಂದು ಈ ವೇಳೆ ಚಂಪಾ ಹೇಳಿದ್ದಾರೆ.  

loader