ಬೆಂಗಳೂರು (ಮಾ. 18): ಯುಗಾದಿ ಹಬ್ಬದ ದಿನವೇ ಬೆಂಗಳೂರಲ್ಲಿ ಸರಗಳ್ಳರು ಕೈಚಳಕ ತೋರಿದ್ದಾರೆ. ನಗರದ ಜ್ಞಾನಭಾರತಿ  ಬಳಿ ಮುಂಜಾನೆ ಹಾಲು ತರಲು ಹೋದ ಮಹಿಳೆಯ ಸರವನ್ನು ಕಿತ್ತು ಪರಾರಿಯಾಗಿದ್ದಾರೆ.

 56 ವರ್ಷದ ವಸಂತಮ್ಮ ಸರ ಕಳೆದುಕೊಂಡ ಮಹಿಳೆ.  ಮುಂಜಾನೆ ಹಾಲು ತರೋಕೆ ಅಂತ ಮನೆಯಿಂದ ಹೊರಟಿದ್ದ ವಸಂತಮ್ಮ ಕತ್ತಲ್ಲಿದ್ದ 60 ಗ್ರಾಂ ಚಿನ್ನದ ಸರವನ್ನು ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಕಿತ್ಕೊಂಡು ಪರಾರಿಯಾಗಿದ್ದಾರೆ.  ಜ್ಞಾನಭಾರತಿ  ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.