ಎರಡೂ ಪ್ರಶ್ನೆ ಪತ್ರಿಕೆಗಳಲ್ಲಿ ತಲಾ ಒಂದು ಪ್ರಶ್ನೆಯನ್ನು ಅಸ್ಪಷ್ಟವಾಗಿ ಕೇಳಲಾಗಿದ್ದ ಕಾರಣ ತಜ್ಞರ ಸಲಹೆಯಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2 ಗ್ರೇಸ್‌ ಅಂಕ ನೀಡಲಿದೆ. ಭೌತ ಶಾಸ್ತ್ರ ವಿಷಯದ ಪರೀಕ್ಷೆಯಲ್ಲಿ ಮೊದಲನೇ ಪ್ರಶ್ನೆ ಮತ್ತು ರಸಾಯನಶಾಸ್ತ್ರ ಪರೀಕ್ಷೆಯ 48ನೇ ಪ್ರಶ್ನೆಗೆ ಈ ಗ್ರೇಸ್‌ ಅಂಕ ದೊರೆತಿದೆ.

ಬೆಂಗಳೂರು(ಮೇ.08): ಈ ಬಾರಿಯ ಸಿಇಟಿ ಬರೆದ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ ಮತ್ತು ರಸಾಯ ನಶಾಸ್ತ್ರ ವಿಷಯಗಳಲ್ಲಿ ತಲಾ ಒಂದು ಗ್ರೇಸ್‌ ಅಂಕ ಸಿಗಲಿದೆ. ಎರಡೂ ಪ್ರಶ್ನೆ ಪತ್ರಿಕೆಗಳಲ್ಲಿ ತಲಾ ಒಂದು ಪ್ರಶ್ನೆಯನ್ನು ಅಸ್ಪಷ್ಟವಾಗಿ ಕೇಳಲಾಗಿದ್ದ ಕಾರಣ ತಜ್ಞರ ಸಲಹೆಯಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2 ಗ್ರೇಸ್‌ ಅಂಕ ನೀಡಲಿದೆ.ಎರಡೂ ಪ್ರಶ್ನೆ ಪತ್ರಿಕೆಗಳಲ್ಲಿ ತಲಾ ಒಂದು ಪ್ರಶ್ನೆಯನ್ನು ಅಸ್ಪಷ್ಟವಾಗಿ ಕೇಳಲಾಗಿದ್ದ ಕಾರಣ ತಜ್ಞರ ಸಲಹೆಯಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2 ಗ್ರೇಸ್‌ ಅಂಕ ನೀಡಲಿದೆ. ಭೌತ ಶಾಸ್ತ್ರ ವಿಷಯದ ಪರೀಕ್ಷೆಯಲ್ಲಿ ಮೊದಲನೇ ಪ್ರಶ್ನೆ ಮತ್ತು ರಸಾಯನಶಾಸ್ತ್ರ ಪರೀಕ್ಷೆಯ 48ನೇ ಪ್ರಶ್ನೆಗೆ ಈ ಗ್ರೇಸ್‌ ಅಂಕ ದೊರೆತಿದೆ. ಈ ಎರಡೂ ಪ್ರಶ್ನೆಗಳು ಕೊಂಚ ಉದ್ದ ಹಾಗೂ ಅಸ್ಪಷ್ಟತೆಯಿಂದ ಕೂಡಿದ್ದವು, ಇದರಿಂದ ಉತ್ತರ ಬರೆಯಲು ಗೊಂದಲ ಉಂಟಾಗಿ​ದ್ದಾಗಿ ವಿದ್ಯಾರ್ಥಿಗಳು ಮತ್ತು ಕಾಲೇಜು ಉಪ​ನ್ಯಾ​ಸಕರಿಂದ ಆಕ್ಷೇಪಗಳು ಕೇಳಿಬಂದಿದ್ದವು.
ಆಕ್ಷೇಪದ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ತಜ್ಞ ರೊಂದಿಗೆ ಚರ್ಚೆ ನಡೆಸಿದರು. ಗ್ರೇಸ್‌ ಅಂಕ ನೀಡುವ ಮಾಹಿತಿಯನ್ನು ಪ್ರಾಧಿಕಾರ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ತಾತ್ಕಾಲಿಕ ಸರಿ ಉತ್ತರದಲ್ಲೂ ನೀಡಲಾಗಿದೆ ಎಂದು ಪ್ರಾಧಿ ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.