ಸೇನಾ ಟ್ಯಾಂಕ್‌'ಗಳು ಹಾಗೂ ಫಿರಂಗಿಗಳಿಗೆ ಬೇಕಾದ ಅತ್ಯಂತ ಪ್ರಮುಖವಾದ ಶಸ್ತ್ರಾಸ್ತ್ರಗಳು ಮುಂದಿನ ಮಾಸಾರಂಭದಿಂದ ಸೇನಾ ಬತ್ತಳಿಕೆ ಸೇರಲಿವೆ ಎಂದು ವಾಹಿನಿಯೊಂದು ವರದಿ ಮಾಡಿದೆ.
ನವದೆಹಲಿ: ಸಿಕ್ಕಿಂ ಸಮೀಪದ ವಿವಾದಿತ ಡೋಕ್ಲಾಮ್ ಪ್ರದೇಶಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಚೀನಾ ನಡುವೆ ತ್ವೇಷಮಯ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ಮಹಾಲೇಖಪಾಲರು ಭಾರತದ ಬಳಿ 10 ದಿನದ ಯುದ್ಧಕ್ಕಾಗುವಷ್ಟು ಮಾತ್ರ ಶಸ್ತ್ರಾಸ್ತ್ರಗಳು ಇವೆ ಎಂದು ವರದಿ ನೀಡಿದ್ದಾರೆ. ಈ ನಡುವೆಯೇ, ದೀರ್ಘಕಾಲಿನ ಯುದ್ಧ ನಡೆಸಲು ಬೇಕಾಗುವಷ್ಟು ಶಸ್ತ್ರಾಸ್ತ್ರಗಳನ್ನು ಸೇನೆಗೆ ಪೂರೈಸುವ ಕೆಲಸ ಆರಂಭವಾಗಿದೆ.
ಸೇನಾ ಟ್ಯಾಂಕ್'ಗಳು ಹಾಗೂ ಫಿರಂಗಿಗಳಿಗೆ ಬೇಕಾದ ಅತ್ಯಂತ ಪ್ರಮುಖವಾದ ಶಸ್ತ್ರಾಸ್ತ್ರಗಳು ಮುಂದಿನ ಮಾಸಾರಂಭದಿಂದ ಸೇನಾ ಬತ್ತಳಿಕೆ ಸೇರಲಿವೆ ಎಂದು ವಾಹಿನಿಯೊಂದು ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸೇನಾ ಮೂಲಗಳು, ಆಗಸ್ಟ್ ಆರಂಭದಿಂದಲೇ ಸೇನೆಗೆ ಶಸ್ತ್ರಾಸ್ತ್ರಗಳು ಪೂರೈಕೆಯಾಗಲಿವೆ. ದೀರ್ಘಾವಧಿ ಘೋರ ಯುದ್ಧ ಎದುರಿಸಲು 40 ದಿನಗಳಿಗೆ ಆಗುವಷ್ಟು ಶಸ್ತ್ರಾಸ್ತ್ರಗಳ ದಾಸ್ತಾನು ಇರಬೇಕಾಗುತ್ತದೆ. ಮುಂದಿನ ವರ್ಷಾಂತ್ಯದೊಳಗೆ ಆ ಗುರಿಯನ್ನು ಸೇನೆ ತಲುಪಲಿದೆ ಎಂದು ಹೇಳಿವೆ ಎಂದು ಎನ್'ಡಿಟೀವಿ ವರದಿ ಮಾಡಿದೆ.
ಹಲವಾರು ಬಗೆಯ ಶಸ್ತ್ರಾಸ್ತ್ರಗಳು ಹಾಗೂ ಫ್ಯೂಸ್'ಗಳ ಕೊರತೆ ಸೇನೆಗೆ ಇತ್ತು. ಈಗ ಅವುಗಳು ಸರಬರಾಜು ಪೂರ್ವ ಪರಿಶೀಲನಾ ಹಂತದಲ್ಲಿವೆ. ವಿದೇಶಿ ಪೂರೈಕೆದಾರರು ಅವನ್ನು ರಫ್ತು ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
epaperkannadaprabha.com
