ಕೇಂದ್ರ ಗೃಹ ಸಚಿವಾಲಯದ ಹಿಂದಿ ಸಲಹಾ ಸಮಿತಿಯು, ಸರ್ಕಾರದ ಎಲ್ಲಾ ಅಧಿಕೃತ ದಾಖಲೆ, ವರದಿಯನ್ನು ಹಿಂದಿಯಲ್ಲೇ ಪ್ರಕಟಿಸುವ ಕುರಿತು ಚರ್ಚಿಸಿದೆ. ಜೊತೆಗೆ ಈ ವರದಿಗಳನ್ನು ಬೇರೆ ಭಾಷೆಯಲ್ಲಿ ಪ್ರಕಟಿಸದೇ ಇರುವ ಬಗ್ಗೆಯೂ ಚರ್ಚೆ ನಡೆಸಿದೆ

ನವದೆಹಲಿ: ಆಡಳಿತದಲ್ಲಿ ಹಿಂದಿ ಭಾಷೆ ಹೇರಿದ ಬಗ್ಗೆ ದಕ್ಷಿಣದ ಹಲವು ರಾಜ್ಯಗಳ ವಿರೋಧದ ನಡುವೆಯೂ, ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಇನ್ನಷ್ಟುಹೆಜ್ಜೆ ಮುಂದೆ ಇರಿಸುವ ಸ್ಪಷ್ಟಸುಳಿವು ಸಿಕ್ಕಿದೆ.

ಶುಕ್ರವಾರ ಇಲ್ಲಿ ನಡೆದ ಕೇಂದ್ರ ಗೃಹ ಸಚಿವಾಲಯದ ಹಿಂದಿ ಸಲಹಾ ಸಮಿತಿಯು, ಸರ್ಕಾರದ ಎಲ್ಲಾ ಅಧಿಕೃತ ದಾಖಲೆ, ವರದಿಯನ್ನು ಹಿಂದಿಯಲ್ಲೇ ಪ್ರಕಟಿಸುವ ಕುರಿತು ಚರ್ಚಿಸಿದೆ.

ಜೊತೆಗೆ ಈ ವರದಿಗಳನ್ನು ಬೇರೆ ಭಾಷೆಯಲ್ಲಿ ಪ್ರಕಟಿಸದೇ ಇರುವ ಬಗ್ಗೆಯೂ ಚರ್ಚೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಹಿಂದಿ ಭಾಷೆಯನ್ನು ಎಲ್ಲೆಡೆ ಪ್ರೋತ್ಸಾಹಿಸುವ ಬಗ್ಗೆಯೂ ಒಮ್ಮತ ವ್ಯಕ್ತವಾಗಿದೆ.