ನಿಖಾ ಹಲಾಲಾ ಹಾಗೂ ಬಹುಪತ್ನಿತ್ವ ವಿರೋಧಿಸಲು ಕೇಂದ್ರ ಸಜ್ಜು

Centre to oppose nikah halala in Supreme Court
Highlights

ತ್ರಿವಳಿ ತಲಾಖನ್ನು ವಿರೋಧಿಸಿದ ಮಾದರಿಯಲ್ಲೇ ಮುಸ್ಲಿಂ ಸಮುದಾಯದಲ್ಲಿರುವ ನಿಖಾ ಹಲಾಲಾ ಹಾಗೂ ಬಹುಪತ್ನಿತ್ವ ಪದ್ಧತಿಗಳ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಹೇಳಿಕೆ ಸಲ್ಲಿಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ ಎಂದು ತಿಳಿದುಬಂದಿದೆ.

ನವದೆಹಲಿ :  ತ್ರಿವಳಿ ತಲಾಖನ್ನು ವಿರೋಧಿಸಿದ ಮಾದರಿಯಲ್ಲೇ ಮುಸ್ಲಿಂ ಸಮುದಾಯದಲ್ಲಿರುವ ನಿಖಾ ಹಲಾಲಾ ಹಾಗೂ ಬಹುಪತ್ನಿತ್ವ ಪದ್ಧತಿಗಳ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಹೇಳಿಕೆ ಸಲ್ಲಿಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ ಎಂದು ತಿಳಿದುಬಂದಿದೆ.

ಕೇಂದ್ರ ಕಾನೂನು ಸಚಿವಾಲಯದ ಮೂಲಗಳು ಸಿಎನ್‌ಎನ್‌-ನ್ಯೂಸ್‌ 18 ಸುದ್ದಿವಾಹಿನಿಗೆ ಈ ವಿಷಯ ತಿಳಿಸಿದ್ದು, ತ್ರಿವಳಿ ತಲಾಖ್‌ ವೇಳೆ ತಳೆದ ನಿಲುವನ್ನೇ ನಿಖಾ ಹಲಾಲಾ ಮತ್ತು ಬಹುಪತ್ನಿತ್ವ ವಿಷಯದಲ್ಲಿ ತಳೆಯಲಾಗುತ್ತದೆ. ಈ ಕುರಿತು ಸಲ್ಲಿಸಬೇಕಿರುವ ಪ್ರತಿಕ್ರಿಯೆಯೂ ಸಿದ್ಧವಿದೆ ಎಂದು ತಿಳಿಸಿವೆ.

ಈ ಎರಡೂ ಸಾಮಾಜಿಕ ಪದ್ಧತಿಗಳ ವಿರುದ್ಧ ಬಿಜೆಪಿ ಮುಖಂಡ ಅಶ್ವನಿ ಉಪಾಧ್ಯಾಯ ಹಾಗೂ ಕೆಲವು ಮುಸ್ಲಿಂ ಮಹಿಳಾ ಸಂತ್ರಸ್ತರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದು, ಇದನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶ ನ್ಯಾ

ದೀಪಕ್‌ ಮಿಶ್ರಾ, ನ್ಯಾ. ಎ.ಎಂ. ಖಾನ್ವಿಲ್ಕರ್‌ ಹಾಗೂ ನ್ಯಾ. ಡಿ.ವೈ. ಚಂದ್ರಚೂಡ ಅವರನ್ನು ಒಳಗೊಂಡ ಪೀಠ ಕೈಗೆತ್ತಿಕೊಳ್ಳಲಿದೆ. ಈ ಹಿಂದೆ ತ್ರಿವಳಿ ತಲಾಖ್‌ ವಿಚಾರಣೆ ವೇಳೆ, ನಿಖಾ ಹಲಾಲಾ ಹಾಗೂ ಬಹುಪತ್ನಿತ್ವ ವಿಷಯಗಳ ವಿಚಾರಣೆಗೆ ಅಂದಿನ ಮುಖ್ಯ ನ್ಯಾಯಾಧೀಶ ನ್ಯಾ. ಜೆ.ಎಸ್‌. ಖೇಹರ್‌ ನಿರಾಕರಿಸಿದ್ದರು. 

loader