ಸ್ವಚ್ಛ ಭಾರತ ಅಭಿಯಾನದಡಿ ಮುಂದಿನ ಆರ್ಥಿಕ ವರ್ಷದ ಅಂತ್ಯದೊಳಗೆ ಮದ್ರಸಾಗಳಲ್ಲಿ 1 ಲಕ್ಷ ಶೌಚಾಲಯ ನಿರ್ಮಿಸಲಾಗುವುದು- ಕೇಂದ್ರ ಸಚಿವ ಮುಖ್ತಾರ್‌ ಅಬ್ಬಾಸ್‌ ನಖ್ವಿ

ನವದೆಹಲಿ(ಮಾ.19): ದೇಶದಾದ್ಯಂತ ಇರುವ ಸಾಂಪ್ರದಾಯಿಕ ಕಲಿಕಾ ಕೇಂದ್ರಗಳಾದ ಮದ್ರಸಾಗಳಲ್ಲಿ 1 ಲಕ್ಷ ಶೌಚಾಲಯಗಳನ್ನು ನಿರ್ಮಿಸುವುದಾಗಿ ಕೇಂದ್ರ ಸಚಿವ ಮುಖ್ತಾರ್‌ ಅಬ್ಬಾಸ್‌ ನಖ್ವಿ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶೌಚಾಲಯಗಳ ಜತೆಗೆ ಸಾಂಪ್ರದಾಯಿಕ ಕಲಿಕಾ ಕೇಂದ್ರಗಳಲ್ಲಿ ಮಧ್ಯಾಹ್ನ ಬಿಸಿಯೂಟ, ಶಿಕ್ಷಕರ ಕೌಶಲ್ಯ ಅಭಿವೃದ್ಧಿ ಮಾಡುವ ಗುರಿಯನ್ನು ಹೊಂದಲಾಗಿದೆ.

ದೇಶಾದ್ಯಂತ ಮದ್ರಸಾಗಳಲ್ಲಿ ‘3ಟಿ' (ಟಿ-ಟೀಚ​ರ್ಸ್, ಟಿಫನ್‌, ಟಾಯ್ಲೆಟ್‌) ಫಾರ್ಮಲಾ ಅನುಷ್ಠಾನ ಗೊಳಿಸಲಾಗುವುದು. ಸ್ವಚ್ಛ ಭಾರತ ಅಭಿಯಾನದಡಿ ಮುಂದಿನ ಆರ್ಥಿಕ ವರ್ಷದ ಅಂತ್ಯದೊಳಗೆ ಮದ್ರಸಾಗಳಲ್ಲಿ 1 ಲಕ್ಷ ಶೌಚಾಲಯ ನಿರ್ಮಿಸಲಾಗುವುದೆಂದಿದ್ದಾರೆ.