ತೆಲಂಗಾಣದಲ್ಲಿ ‘ಶಾದಿ ಮುಬಾರಕ್’ ಯೋಜನೆಯ ರೀತಿಯಲ್ಲಿಯೇ ಪದವಿ ಪಡೆದ ಪೂರೈಸಿ ವಿದ್ಯಾರ್ಥಿವೇತನ ಪಡೆಯುತ್ತಿರುವ ಹೆಣ್ಣು ಮಕ್ಕಳ ವಿವಾಹಕ್ಕೆ ‘ಶಾದಿ ಶಗುನ್’ ಯೋಜನೆಯ ಅಡಿಯಲ್ಲಿ 51,೦೦೦ ರು. ನೀಡಲಾಗುವುದು. ಇದರಿಂದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ದೊಡ್ಡಮಟ್ಟದಲ್ಲಿ ಉತ್ತೇಜನ ದೊರೆಯಲಿದೆ ಎಂದು ನಖ್ವಿ ಹೇಳಿದ್ದಾರೆ.
ಹೈದರಾಬಾದ್(ಜು.08): ಕರ್ನಾಟಕದ ಸಿದ್ದರಾಮಯ್ಯ ಸರ್ಕಾರದ ‘ಶಾದಿಭಾಗ್ಯ’ ಹಾಗೂ ತೆಲಂಗಾಣದ ‘ಶಾದಿ ಮುಬಾರಕ್’ ಯೋಜನೆಯ ರೀತಿಯೇ ಕೇಂದ್ರದ ನರೇಂದ್ರ ಮೋದಿ ಸರ್ಕಾರವೂ ಯೋಜನೆಯೊಂದನ್ನು ಜಾರಿಗೆ ತರಲು ಮುಂದಾಗಿದೆ.
ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯದ ವಿದ್ಯಾರ್ಥಿವೇತನಕ್ಕೆ ಅರ್ಹರಾದ ಅಲ್ಪ ಸಂಖ್ಯಾತ ಸಮುದಾಯದ ಹೆಣ್ಣು ಮಕ್ಕಳ ವಿವಾಹಕ್ಕೆ 51,೦೦೦ ರು. ಹಣಕಾಸು ನೆರವು ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ತೆಲಂಗಾಣದಲ್ಲಿ ‘ಶಾದಿ ಮುಬಾರಕ್’ ಯೋಜನೆಯ ರೀತಿಯಲ್ಲಿಯೇ ಪದವಿ ಪಡೆದ ಪೂರೈಸಿ ವಿದ್ಯಾರ್ಥಿವೇತನ ಪಡೆಯುತ್ತಿರುವ ಹೆಣ್ಣು ಮಕ್ಕಳ ವಿವಾಹಕ್ಕೆ ‘ಶಾದಿ ಶಗುನ್’ ಯೋಜನೆಯ ಅಡಿಯಲ್ಲಿ 51,೦೦೦ ರು. ನೀಡಲಾಗುವುದು. ಇದರಿಂದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ದೊಡ್ಡಮಟ್ಟದಲ್ಲಿ ಉತ್ತೇಜನ ದೊರೆಯಲಿದೆ ಎಂದು ನಖ್ವಿ ಹೇಳಿದ್ದಾರೆ.
ಇದೇ ವೇಳೆ, ಗರೀಬ್ ನವಾಜ್ ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ದೇಶದ 100 ಜಿಲ್ಲೆಗಳಲ್ಲಿ ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.